ಹುಟ್ಟಿದ ದಿನವೇ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ನಟಿ ಮಯೂರಿ ಮಗು

ಬುಧವಾರ, 17 ಮಾರ್ಚ್ 2021 (09:04 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಮಯೂರಿ ಕ್ಯಾತರಿ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಖುಷಿಯ ವಿಚಾರವನ್ನು ಅವರು ನಿನ್ನೆಯೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


ಮದುವೆಯಾಗಿ ವರ್ಷ ತುಂಬುವುದರೊಳಗೆ ಮಯೂರಿ ಮಡಿಲಿಗೆ ಮುದ್ದು ಮಗನ ಆಗಮನವಾಗಿದೆ. ಈ ವಿಚಾರವನ್ನು ಸಂಭ್ರಮದಿಂದಲೇ ಹಂಚಿಕೊಂಡಿರುವ ಮಯೂರಿ ಜೊತೆಗೆ ಮತ್ತೊಂದು ಸುದ್ದಿಯನ್ನೂ ನೀಡಿದ್ದಾರೆ.

ಅದೇನೆಂದರೆ ಮಯೂರಿ ಮಗ ಹುಟ್ಟಿದ ದಿನವೇ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದಾನೆ. ಮಯೂರಿ-ಅರುಣ್ ದಂಪತಿ ತಮ್ಮ ಮಗನ ಹೆಸರಲ್ಲಿ ಇನ್ ಸ್ಟಾಗ್ರಾಂನಲ್ಲಿ ಹೊಸ ಪೇಜ್ ತೆರೆದಿದ್ದಾರೆ. ಆದರೆ ಸದ್ಯಕ್ಕೆ ಈ ಪೇಜ್ ಗೆ ಈಗ ಸ್ಟಾರ್ ಬಾಯ್ ಎಂದು ಹೆಸರಿಡಲಾಗಿದೆ. ಈ ಪುಟದಲ್ಲಿ ಮಯೂರಿ ತಮ್ಮ ಮಗನ ಅಪ್ ಡೇಟ್ ಗಳನ್ನು ಪ್ರಕಟಿಸಲಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ