ನಾಗಾರ್ಜುನ ಪುತ್ರನ ನಿಶ್ಚಿತಾರ್ಥದ ವೈಭವ ಹೇಗಿತ್ತು ಗೊತ್ತಾ?
ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ ತಮ್ಮ ಗೆಳತಿ ಶ್ರಿಯಾ ಭೂಪಾಲ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಶುಕ್ರವಾರ ರಾತ್ರಿ ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬದ ಆಪ್ತೇಷ್ಟರ ಸಮ್ಮುಖದಲ್ಲಿ ತೆಲುಗು ನಟ ಅಖಿಲ್ ಮತ್ತು ಶ್ರಿಯಾ ಉಂಗುರ ಬದಲಾಯಿಸಿಕೊಂಡರು. ಹೈದರಾಬಾದ್ ಮೂಲದ ಉದ್ಯಮಿ ಜಿವಿಕೆ ರೆಡ್ಡಿ ಪುತ್ರಿ ಶ್ರಿಯಾ.
ನಿಶ್ಚಿತಾರ್ಥ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆದಿದೆ. ಇನ್ನು ಮದುವೆ ಇಟೆಲಿಯಲ್ಲಿ ನಡೆಸಲು ಕುಟುಂಬ ವರ್ಗ ಉದ್ದೇಶಿಸಿದೆಯಂತೆ. ಇಟೆಲಿಗೆ 600 ಜನ ಆಹ್ವಾನಿತರನ್ನು ಕರೆದುಕೊಂಡು ಹೋಗುವ ಐಡಿಯಾ ಕುಟುಂಬ ವರ್ಗಕ್ಕಿದೆ ಎನ್ನಲಾಗಿದೆ. ಅಂತೂ ತಮ್ಮ ವೈಭವಕ್ಕೆ ತಕ್ಕ ಹಾಗೆ ಮದುವೆ ಮಾಡುತ್ತಿದ್ದಾರೆ ಅಕ್ಕಿನೇನಿ ಕುಟುಂಬ.