ಡ್ರಗ್ಸ್ ಕೇಸ್ ನಲ್ಲಿ ನಟ ಅಜಾಜ್ ಖಾನ್ ರನ್ನು ಬಂಧಿಸಿದ ಎನ್ ಸಿಬಿ
ಬುಧವಾರ, 31 ಮಾರ್ಚ್ 2021 (11:55 IST)
ಮುಂಬೈ : ಮಹೇಶ್ ಬಾಬು ಅಭಿನಯದ ಡೂಕುಡು ಚಿತ್ರದಲ್ಲಿ ನಟಿಸಿದ ಬಾಲಿವುಡ್ ನಟ ಅಜಾಜ್ ಖಾನ್ ಅವರನ್ನು ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಎನ್ ಸಿಬಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ನಟ ಅಜಾಜ್ ಖಾನ್ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್ ಸಿಬಿ) ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾರೆ. ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಹಲವು ನಟ ನಟಿಯರು ಸಿಲುಕಿಹಾಕಿಕೊಂಡಿದ್ದಾರೆ.
ಈ ಬಗ್ಗೆ ತನಿಖೆ ಮುಂದುವರಿಸಿದ ಅಧಿಕಾರಿಗಳು ಅಜಾಜ್ ಖಾನ್ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ರಾಜಸ್ಥಾನದಿಂದ ಮುಂಬೈ ಮರಳುತ್ತಿದ್ದಾಗ ವಶಕ್ಕೆ ಪಡೆದಿದ್ದಾರೆ.