ಮದುವೆ ತಯಾರಿಗೆ ಮೊದಲು ದೇವರ ದರ್ಶನ ಪಡೆದ ನಯನತಾರಾ-ವಿಘ್ನೇಶ್

ಗುರುವಾರ, 26 ಮೇ 2022 (09:50 IST)
ಹೈದರಾಬಾದ್: ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಓಡಾಡುತ್ತಿದೆ.

ಈ ನಡುವೆ ನಯನತಾರಾ ಜೊತೆಗೆ ವಿಘ್ನೇಶ್ ತಮ್ಮ ಕುಟುಂಬದ ದೇವಾಲಯ ದರ್ಶನಕ್ಕೆ ಬಂದಿದ್ದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮದುವೆ ತಯಾರಿಗೆ ಮೊದಲು ನಯನತಾರಾ-ವಿಘ್ನೇಶ್ ಜೋಡಿ ದೇವರ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಈ ವರ್ಷವೇ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ