ಮದುವೆಯಾದ ನಾಲ್ಕೇ ದಿನಕ್ಕೆ ಗಂಡನ ಜೊತೆ ತವರಿಗೆ ಬಂದ ನಯನತಾರಾ
ಮದುವೆಯಾದ ತಕ್ಷಣವೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜೋಡಿ ವಿವಾದಕ್ಕೂ ಒಳಗಾಗಿತ್ತು. ನಯನತಾರಾ ಚಪ್ಪಲಿ ಹಾಕಿಕೊಂಡು ಪ್ರಾಂಗಣ ಪ್ರವೇಶಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ವಿಘ್ನೇಶ್ ಶಿವನ್ ಇದಕ್ಕೆ ಸ್ಪಷ್ಟನೆ ಮತ್ತು ಕ್ಷಮೆ ಯಾಚಿಸಿದ್ದರು.
ಇದೀಗ ನವ ಜೋಡಿ ಕೊಚ್ಚಿಯಲ್ಲಿರುವ ನಯನತಾರಾ ಪೋಷಕರ ಮನೆಗೆ ಬಂದಿದೆ. ನಯನತಾರಾ ತವರು ಮನೆಯಲ್ಲಿ ಆತಿಥ್ಯ ಸ್ವೀಕರಿಸಿ ಚೆನ್ನೈಗೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.