ಹಣ ಪೀಕುವ ದಂಧೆಗೆ ಇಳಿದಿರುವ ಒಟಿಟಿ ಫ್ಲ್ಯಾಟ್ ಫಾರಂಗಳು: ನೆಟ್ಟಿಗರ ಆಕ್ರೋಶ
ಲಾಕ್ ಡೌನ್ ಬಳಿಕ ಹೆಚ್ಚಿನ ಒಟಿಟಿ ವೆಬ್ ತಾಣಗಳು ಚಂದಾದಾರರಿಗೆ ಬಿಲ್ ಹೆಚ್ಚಿಸಿ ಶಾಕ್ ಕೊಟ್ಟಿತ್ತು. ಇದಾದ ಬಳಿಕ ಈಗ ಚಂದಾದಾರರಾದರೂ ಕೆಲವು ಹಿಟ್ ಸಿನಿಮಾಗಳನ್ನು ಉಚಿತವಾಗಿ ನೀಡದೇ ಅದಕ್ಕೆ ಹೆಚ್ಚುವರಿ ಹಣ ಪಾವತಿಸಿ ವೀಕ್ಷಿಸಲು ಕೇಳುತ್ತಿವೆ.
ಇದರಿಂದಾಗಿ ವಾರ್ಷಿಕವಾಗಿ ಒಂದು ಸಾವಿರ ರೂ.ಗಿಂತ ಅಧಿಕ ಬಿಲ್ ಪಾವತಿಸಿದರೂ ಕೆಲವು ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸುವ ಅವಕಾಶ ಸಿಗುತ್ತಿಲ್ಲ. ಮತ್ತಷ್ಟು ಹಣ ಪೀಕುತ್ತಿರುವುದರಿಂದ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಉದಾಹರಣೆಗೆ ಇತ್ತೀಚೆಗೆ ಅಮೆಝೋನ್ ಪ್ರೈಮ್ ವಾರ್ಷಿ ಚಂದಾ ಹಣವನ್ನು 1499 ರೂ.ಗೆ ಏರಿಕೆ ಮಾಡಿದೆ. ಹಾಗಿದ್ದರೂ ಇತ್ತೀಚೆಗೆ ಬಿಡುಗಡೆಗೊಂಡ ಕೆಲವು ಹಿಟ್ ಸಿನಿಮಾಗಳನ್ನು ವೀಕ್ಷಿಸಲು ಹೆಚ್ಚುವರಿ ಹಣ ಪಾವತಿಸಬೇಕು. ಇದು ಅನ್ಯಾಯ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.