ಯಶ್-ರಾಧಿಕಾ ಪಂಡಿತ್ ವಿವಾಹ ಸುದ್ದಿಗಾಗಿ ವಿಶೇಷ ಫೇಸ್ ಬುಕ್ ಪೇಜ್
ಮಂಗಳವಾರ, 29 ನವೆಂಬರ್ 2016 (14:25 IST)
ಬೆಂಗಳೂರು: ಸ್ಯಾಂಡಲ್ ವುಡ್ ಜನಪ್ರಿಯ ಜೋಡಿ ಯಶ್-ರಾಧಿಕಾ ಪಂಡಿತ್ ಮದುವೆಯ ಬಗ್ಗೆ ಹೊಸ ಹೊಸ ಸುದ್ದಿ ತಿಳಿಯಲು ಬಯಸುವ ಅಭಿಮಾನಿಗಳಿಗಾಗಿ ಹೊಸ ಫೇಸ್ ಬುಕ್ ಪೇಜ್ ತೆರೆಯಲಾಗಿದೆ.
ಯಶ್ ಮತ್ತು ರಾಧಿಕಾ ಪಂಡಿತ್ ಎಂಬ ಹೊಸ ಫೆಸ್ ಬುಕ್ ಪೇಜ್ ನ್ನು ಅವರ ಅಧಿಕೃತ ಫೇಸ್ ಬುಕ್ ಪೇಜ್ ನ ಟೀಂನವರೇ ಹುಟ್ಟು ಹಾಕಿದ್ದಾರೆ. ಇದರಲ್ಲಿ ಯಶ್ ಯಾರಿಗೆಲ್ಲಾ ಆಮಂತ್ರಣ ನೀಡಿದ್ದಾರೆಂಬುದು ಫೋಟೋ ಸಮೇತ ಪ್ರಕಟವಾಗುತ್ತಿದೆ. ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಯಾರೆಲ್ಲಾ ಮದುವೆಗೆ ಬರುತ್ತಾರೆ, ಮದುವೆಯಲ್ಲಿ ಏನೆಲ್ಲಾ ವಿಶೇಷತೆಯಿರುತ್ತದೆ, ಅವರ ಉಡುಗೆ ತೊಡುಗೆಗಳ ಬಗ್ಗೆ ವಿವರಣೆಗಳನ್ನು ಈ ಪೇಜ್ ನಲ್ಲಿ ಹಾಕುತ್ತಾರಂತೆ.
ಎಂಥಾ ಕಾಲ ಬಂತು ನೋಡಿ. ತಾರಾ ಜೋಡಿಗಳ ಮದುವೆ ಬಗ್ಗೆ ಫೇಸ್ ಬುಕ್ ಪೇಜ್ ಆರಂಭವಾಗಿದೆಯೆಂದರೆ, ಈ ಜೋಡಿಯ ಮದುವೆ ಬಗ್ಗೆ ಅದೆಷ್ಟು ಕುತೂಹಲ ಜನಕ್ಕಿದೆ ಅಂತ. ಬಹುಶಃ ಸ್ಯಾಂಡಲ್ ವುಡ್ ನಲ್ಲಿ ಯಾರ ಮದುವೆಗೂ ಇಷ್ಟೊಂದು ಹೈಪ್ ಕ್ರಿಯೇಟ್ ಆಗಿರಲಿಕ್ಕಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ