ಶಿವರಾಜ್ ಕುಮಾರ್ ಸಿನಿಮಾಗೆ ಹೊಸ ವಿಲನ್ ಎಂಟ್ರಿ

ಮಂಗಳವಾರ, 26 ಜುಲೈ 2016 (14:08 IST)
ಶಿವರಾಜ್ ಕುಮಾರ್ ಅವರ ಟಗರು ಸಿನಿಮಾ ದಿನದಿಂದ ದಿನಕ್ಕೆ ಕ್ಯೂರಿಯಾಸಿಟಿಯನ್ನು ಹೆಚ್ಚಿಸುತ್ತಲೇ ಸಾಗುತ್ತಿದೆ. ಸಿನಿಮಾದ ತಾರಾಬಳಗಕ್ಕೆ ಈಗ ಹೊಸ ಸೇರ್ಪಡೆಯಾದ ಬಗ್ಗೆ ನೀವೇನಾದ್ರು ಕೇಳಿದ್ರೆ ಸಿನಿಮಾವನ್ನು ಯಾವಾಗಪ್ಪಾ ನೋಡುತ್ತೇವೆ ಅಂತಾ ಕಾತುರರಾಗೋದು ಪಕ್ಕಾ. ಅಂತಹ ಸುದ್ದಿಯೊಂದು ಇದೀಗ ಸಿನಿಮಾ ತಂಡದಿಂದ ಹೊರ ಬಿದ್ದಿದೆ.
ಟಗರು ಸಿನಿಮಾದಲ್ಲಿ ಸಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಕೆಡಂಸಂಪಿಗೆ ಸಿನಿಮಾ ಖ್ಯಾತಿಯ ಮಾನ್ವಿತಾ ಹರೀಶ್ ಅವರು ಕಾಣಿಸಿಕೊಳ್ಳುತ್ತಾರೆ ಅನ್ನೋ ವಿಚಾರ ಹೊರ ಬಿದ್ದಾಗಲೇ ಅಭಿಮಾನಿಗಳು ವ್ಹಾ! ಅನ್ನೋ ಉದ್ಗಾರ ತೆಗೆದಿದ್ದರು. ಇದೀಗ ಅಂತಹದ್ದೇ ಮತ್ತೊಂದು ಸುದ್ದಿಯೊಂದು ಹೊರ ಬಿದ್ದಿದೆ. ಈಗಾಗಲೇ ಸಿನಿಮಾದಲ್ಲಿ ವಿಲನ್ ಪಾತ್ರಕ್ಕೆ ಹುಡುಗಾಟ ಶುರುವಾಗಿದೆ ಅಂತಾ ಸಿನಿಮಾ ತಂಡ ಹೇಳಿತ್ತು.ಆದ್ರೀಗ ಸಿನಿಮಾದ ಖಳನಾಯಕನ ಆಯ್ಕೆ ಕೂಡ ನಡೆದಿದೆ. ರಾಟೆ ಸಿನಿಮಾ ಖ್ಯಾತಿಯ ಧನಂಜಯ್ ಅವರು ನಾಯಕನ ಸ್ಥಾನದಿಂದ ಈ ಸಿನಿಮಾದ ಮೂಲಕ ಖಳನಾಯಕನಾಗಿ ಮಿಂಚಲಿದ್ದಾರೆ.
 
ಅಂದ್ಹಾಗೆ ಇದೇ ಮೊದಲ ಬಾರಿಗೆ ಧನಂಜಯ್ ಅವರು ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಸೂರಿ ಅವರೇ ಧನಂಜಯ್ ಅವರನ್ನು ಸಿನಿಮಾದ ವಿಲನ್ ಪಾತ್ರಕ್ಕೆ ಆಯ್ಕೆ ಮಾಡಿದ್ದಾರಂತೆ.ಅಂದ್ಹಾಗೆ ಶಿವಣ್ಣ ಹಾಗೂ ಧನಂಜಯ್ ಅವರು ಕಾಂಬಿನೇಷನ್ ಹೇಗಿರುತ್ತೆ ಅಂತಾ ನೋಡೋದಕ್ಕೆ ಅಭಿಮಾನಿಗಳು ಯಾವ ರೀತಿ ಕಾತುರರಾಗಿದ್ದಾರೋ ಹಾಗೇ ಸಿನಿಮಾ ತಂಡ ಕೂಡ ಕಾತುರದಲ್ಲಿದೆಯಂತೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ