ಫೈಟರ್ ವಿವೇಕ್ ಕುಟುಂಬಕ್ಕೆ ನೆರವಾದ ನಿಖಿಲ್ ಕುಮಾರಸ್ವಾಮಿ

ಮಂಗಳವಾರ, 10 ಆಗಸ್ಟ್ 2021 (09:45 IST)
ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ದುರಂತ ಸಾವಿಗೀಡಾದ ಫೈಟರ್ ವಿವೇಕ್ ಕುಟುಂಬಕ್ಕೆ ನಟ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೆರವಾಗಿದ್ದಾರೆ.


ವಿವೇಕ್ ಕುಟುಂಬಸ್ಥರಿಗೆ ನಿಖಿಲ್ 50 ಸಾವಿರ ರೂ. ಧನ ಸಹಾಯ ಮಾಡಿದ್ದಾರೆ. ನಿಖಿಲ್ ಅಭಿನಯದ ರೈಡರ್ ಸಿನಿಮಾದಲ್ಲಿ ವಿವೇಕ್ ಪಾತ್ರ ಮಾಡಿದ್ದರು. ಹೀಗಾಗಿ ಇದೇ ಪರಿಚಯದ ಹಿನ್ನಲೆಯಲ್ಲಿ ನಿಖಿಲ್ ಈಗ ಮೃತರ ಕುಟುಂಬಕ್ಕೆ ನೆರವಾಗಿದ್ದಾರೆ.

ರಾಮನಗರದ ಜೋಗನದೊಡ್ಡಿ ಬಳಿ ಫೈಟಿಂಗ್ ದೃಶ್ಯದ ಚಿತ್ರೀಕರಣ ವೇಳೆ ವಿವೇಕ್ ವಿದ್ಯುತ್ ತಂತಿ ಸ್ಪರ್ಶಿಸಿ ದುರಂತ ಸಾವಿಗೀಡಾಗಿದ್ದರು. ಈ ಸಂಬಂಧ ಈಗ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ