ನಿಶ್ಚಿತಾರ್ಥದ ಬಗ್ಗೆ ಹೇಳಿಕೆ ನೀಡಿ ಟ್ರೋಲ್ ಗೊಳಗಾದ ನಿವೇದಿತಾ ಗೌಡ
ನಿಶ್ಚಿತಾರ್ಥದ ಸಂಪ್ರದಾಯಗಳೆಲ್ಲಾ ನನಗೆ ಹೊಸದು ಎಂದು ನಿವೇದಿತಾ ಹೇಳಿದ್ದನ್ನು ಮಾಧ್ಯಮವೊಂದು ವರದಿ ಮಾಡಿತ್ತು. ಇದನ್ನು ಉಲ್ಲೇಖಿಸಿ ನಿವೇದಿತಾರನ್ನು ಟ್ರೋಲ್ ಮಾಡಿರುವ ನೆಟ್ಟಿಗರು ಎಲ್ಲರೂ ಜೀವನದಲ್ಲಿ 25-30 ಬಾರಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರಾ? ಎಲ್ಲರಿಗೂ ನಿಶ್ಚಿತಾರ್ಥದ ಸಂಭ್ರಮ ಜೀವನದಲ್ಲಿ ಒಮ್ಮೆಯೇ ಬರೋದು? ಇನ್ನೆಷ್ಟು ಬಾರಿ ಅನುಭವ ಆಗಬೇಕು ನಿಮಗೆ? ಎಂದು ನಿವೇದಿತಾರನ್ನು ಹಿಗ್ಗಾ ಮುಗ್ಗಾ ಕಾಲೆಳೆದಿದ್ದಾರೆ.