ಬಂತು ನೋಡಿ ಆಪರೇಷನ್ ಅಲಮೇಲಮ್ಮ ಟೀಸರ್

ಶನಿವಾರ, 10 ಡಿಸೆಂಬರ್ 2016 (14:11 IST)
ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬರುತಿರುವ ಆಪರೇಷನ್ ಅಲಮೇಲಮ್ಮ ಚಿತ್ರದ ಟೀಸರ್ ಶುಕ್ರವಾರ ರಿಲೀಸ್ ಆಗಿದೆ. ಎಲ್ಲಾ ಟೀಸರ್, ಟ್ರೇಲರ್‌ಗಳನ್ನು ಹೋಟೆಲು, ಸಭೆ ಸಮಾರಂಭ ಮಾಡಿ ಅದ್ದೂರಿಯಾಗಿ ರಿಲೀಸ್ ಮಾಡಿದರೆ, ಅಲಮೇಲಮ್ಮ ಮಾತ್ರ ರಾಜಾಜಿನಗರದ ತರಕಾರಿ ಮಾರುಕಟ್ಟೆಯಲ್ಲಿ ರಿಲೀಸ್ ಆಗಿದೆ.
 
ಸುನಿ ಈ ರೀತಿ ಯಾಕೆ ಮಾಡಿದ ಎಂದರೆ, ಈ ಚಿತ್ರದ ಹೀರೋ ತರಕಾರಿ ಮಾರಾಟಗಾರ. ಪರಮಿ ಅನ್ನೋ ಹೆಸರಿನ ಪಾತ್ರವನ್ನು ಮನೀಶ್ ರಿಷಿ ಪೋಷಿಸುತ್ತಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ಇದೊಂದು ಲವ್ ಸ್ಟೋರಿ ಆಗಿದ್ದು, ಜೊತೆಗೆ ಒಂದಷ್ಟು ಸೆಂಟಿಮೆಂಟ್ ಅಂಶಗಳು ಇವೆಯಂತೆ.
 
ಚಿತ್ರದ ಹೀರೋ ಅನಾಥ. ತಂದೆತಾಯಿ ಹುಡುಕುವ ಕಥೆ ಜೊತೆಗೆ ಲವ್ ಟ್ರ್ಯಾಕ್ ಸಹ ಸಾಗುತ್ತದೆ ಅಂತಾರೆ ಸುನಿ. ಈ ಚಿತ್ರದಲ್ಲಿ ಯೂ ಟರ್ನ್ ಖ್ಯಾತಿಯ ಶ್ರದ್ಧಾ ಶ್ರೀನಾಥ್ ಅಧ್ಯಾಪಕಿ ಪಾತ್ರ ಪೋಷಿಸಿದ್ದಾರಂತೆ. ಹಾಗಾಗಿ ಮುಂದಿನ ಟೀಸರನ್ನು ಅಧ್ಯಾಪಕಿಯೊಬ್ಬರ ಕೈಯಲ್ಲಿ ರಿಲೀಸ್ ಮಾಡಿಸುವುದಾಗಿ ಹೇಳಿದ್ದಾರೆ. ಬಿ ಜೆ ಭರತ್ ಸಂಗೀತ,  ಅಭಿಷೇಕ್ ಕಾಸರ್ಗೋಡ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ