ಪಿಹೆಚ್ ಡಿ ಮಾಡಲು ಹೊರಟ ಪವಿತ್ರಾ ಲೋಕೇಶ್

ಗುರುವಾರ, 1 ಜೂನ್ 2023 (09:00 IST)
Photo Courtesy: Twitter
ಬೆಂಗಳೂರು: ಮತ್ತೆ ಮದುವೆ ಸಿನಿಮಾ, ನರೇಶ್ ಜೊತೆಗಿನ ಸಂಬಂಧದಿಂದಾಗಿ ಸುದ್ದಿಯಲ್ಲಿದ್ದ ನಟಿ ಪವಿತ್ರಾ ಲೋಕೇಶ್ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ.

ಪವಿತ್ರಾ ಲೋಕೇಶ್ ಈಗ ಓದಿನ ಬಗ್ಗೆ ಗಮನಹರಿಸಲು ಮುಂದಾಗಿದ್ದಾರೆ. ಪಿಹೆಚ್ ಡಿ ಮಾಡಲು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಪಿಹೆಚ್ ಡಿ ಮಾಡಲು ಮುಂದಾಗಿದ್ದಾರೆ.

ಈ ವೇಳೆ ನರೇಶ್ ಕೂಡಾ ಪವಿತ್ರಾಗೆ ಸಾಥ್ ನೀಡಿದ್ದಾರೆ. ಸಿನಿಮಾ ಜೊತೆಗೆ ಓದಿನಲ್ಲೂ ಮೈಲಿಗಲ್ಲು ಸಾಧಿಸಲು ಪವಿತ್ರಾ ಹೊರಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ