ನಾಯಿ ಕಡಿತ ಪ್ರಕರಣದಲ್ಲಿ ದರ್ಶನ್ ಗೆ ವಿಚಾರಣೆಗೆ ಹಾಜರಾಗಲು ನೋಟಿಸ್
ಇತ್ತೀಚೆಗೆ ಮಹಿಳೆಯೊಬ್ಬರಿಗೆ ದರ್ಶನ್ ಮನೆಯ ನಾಯಿ ಕಡಿದಿತ್ತು. ಅಲ್ಲದೆ, ಈ ಸಂಬಂಧ ದರ್ಶನ್ ಮನೆಯ ಸಿಬ್ಬಂದಿ ಮತ್ತು ಮಹಿಳೆ ನಡುವೆ ವಾಗ್ವಾದ ನಡೆದಿತ್ತು. ಈ ಸಂಬಂಧ ಮಹಿಳೆ ಆರ್ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಪೊಲೀಸರು ಸ್ಥಳ ಮಹಜರು ನಡೆಸಿದ್ದರು.
ಈ ಪ್ರಕರಣದಲ್ಲಿ ನಟ ದರ್ಶನ್ ರನ್ನು ಎರಡನೇ ಆರೋಪಿಯಾಗಿ ದೂರು ನೀಡಲಾಗಿತ್ತು. ಇದೀಗ ವಿಚಾರಣೆಗೆ ಹಾಜರಾಗಲು ಪೊಲೀಸರು ಸೂಚನೆ ನೀಡಿದ್ದಾರೆ.