ಮಹಾಭಾರತ ಮಾಡಲು ಹೊರಟಿದ್ದಾರಾ ಬಾಹುಬಲಿ ಪ್ರಭಾಸ್!
ಹೈದರಾಬಾದ್: ಬಾಹುಬಲಿ ಭಾಗ 2 ಚಿತ್ರ ಇದೇ ವಾರ ತೆರೆ ಕಾಣಲಿದೆ. ಬಾಹುಬಲಿಯಲ್ಲಿ ಮಾಡಿದ ಮೋಡಿಯನ್ನು ಪ್ರಭಾಸ್ ಮಹಾಭಾರತದಲ್ಲಿ ಮಾಡಲಿದ್ದಾರೆಯೇ ಇಂತಹದ್ದೊಂದು ಸುದ್ದಿ ಹಬ್ಬಿದೆ.
ಇದೀಗ ಪ್ರಭಾಸ್ ರ ಬಾಹುಬಲಿ ಅವತಾರ ನೋಡಿ ಮೆಚ್ಚಿರುವ ಮಹಾಭಾರತ ಚಿತ್ರ ತಂಡ ಅವರನ್ನು ತಮ್ಮ ಚಿತ್ರಕ್ಕೆ ಕರೆಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆಯಂತೆ.
ಇದು ಮಹಾಭಾರತ ಪೌರಾಣಿಕ ಕತೆಯನ್ನೊಳಗೊಂಡ ಚಿತ್ರ. ಇದು ಭಾರತೀಯ ಚಿತ್ರರಂಗದಲ್ಲೇ ಇತಿಹಾಸ ನಿರ್ಮಿಸಲಿದೆ. ಚಿತ್ರದ ಪೂರ್ವಭಾವಿ ತಯಾರಿ ಈಗಾಗಲೇ ಆರಂಭವಾಗಿದೆ.