ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ ಪ್ರಜ್ವಲ್ ದೇವರಾಜ್

ಮಂಗಳವಾರ, 30 ನವೆಂಬರ್ 2021 (17:00 IST)
ಬೆಂಗಳೂರು: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ತಮ್ಮ ಉದ್ದ ಕೂದಲಿಗೆ ಕತ್ತರಿ ಹಾಕಿದ್ದು, ಕ್ಯಾನ್ಸರ್ ಪೀಡಿತರಿಗೆ ನೆರವಾಗಿದ್ದಾರೆ.

ವೀರಂ ಸಿನಿಮಾಗಾಗಿ ಪ್ರಜ್ವಲ್ ಉದ್ದ ಕೂದಲು ಬಿಟ್ಟಿದ್ದರು. ಆದರೆ ಈಗ ‘ಮಾಫಿಯಾ’ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲಿದ್ದು, ಈ ಸಿನಿಮಾಗಾಗಿ ಕೂದಲಿಗೆ ಕತ್ತರಿ ಹಾಕಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ‍್ಳಲಿದ್ದಾರೆ.

ಇನ್ನು, ತಮ್ಮ ಕೂದಲಿಗೆ ಕತ್ತರಿ ಹಾಕಿ ಅದನ್ನು ಕ್ಯಾನ್ಸರ್ ಪೀಡಿತರಿಗೆ ನೆರವಾಗಲೆಂದು ದಾನ ಮಾಡಿದ್ದಾರೆ. ಡಿ.2 ಕ್ಕೆ ಮಾಫಿಯಾ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ