ಜೀವ ಬೆದರಿಕೆ ಆರೋಪ: ಯೂ ಟ್ಯೂಬ್ ಚಾನೆಲ್ ವಿರುದ್ಧ ನಟ ಪ್ರಕಾಶ್ ರಾಜ್ ದೂರು

ಬುಧವಾರ, 20 ಸೆಪ್ಟಂಬರ್ 2023 (09:10 IST)
ಬೆಂಗಳೂರು: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ನಟ ಪ್ರಕಾಶ್ ರಾಜ್ ಮೇಲೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಯೂ ಟ್ಯೂಬ್ ಒಂದರ ವಿರುದ್ಧ ಅವರು ದೂರು ದಾಖಲಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪ್ರಕಾಶ್ ರಾಜ್ ಚಂದ್ರಯಾನ 3 ಬಗ್ಗೆ ವ್ಯಂಗ್ಯ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದರ ಬಳಿಕ ಸನಾತನ ಧರ್ಮವನ್ನು ಹೀಯಾಳಿಸಿದ್ದ ಉದಯನಿಧಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿ ಹೇಳಿಕೆಯೊಂದನ್ನು ನೀಡಿದ್ದರು. ಇದೆಲ್ಲದರ ಬೆನ್ನಲ್ಲೇ ಯೂ ಟ್ಯೂಬ್ ವಾಹಿನಿಯೊಂದು ಪ್ರಕಾಶ್ ರಾಜ್ ಗೆ ಎಚ್ಚರಿಕೆ ನೀಡುವಂತ ವಿಡಿಯೋವೊಂದನ್ನು ಪ್ರಸಾರ ಮಾಡಿತ್ತು.

ಇದರ ವಿರುದ್ಧ ಈಗ ಪ್ರಕಾಶ್ ರಾಜ್ ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನಗೆ ಮತ್ತು ಕುಟುಂಬದವರಿಗೆ ಯೂ ಟ್ಯೂಬ್ ವಾಹಿನಿ ಜೀವ ಬೆದರಿಕೆ ಹಾಕಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಎಫ್ ಐಆರ್ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ