ಮಗಳು ಮೇಘನಾ ರಾಜ್‌ ಕೊಟ್ಟ ಸೆಷ್ಪಲ್‌ ಗಿಫ್ಟ್‌ ನೋಡಿ ಭಾವುಕರಾದ ಪ್ರಮೀಳಾ ಜೋಶಾಯ್

sampriya

ಮಂಗಳವಾರ, 21 ಮೇ 2024 (19:53 IST)
Photo By X
ಬೆಂಗಳೂರು: ಅಮ್ಮಂದಿರ ದಿನ ಹಾಗೂ ಅಮ್ಮನ ಹುಟ್ಟುಹಬ್ಬಕ್ಕೆ ನಟಿ ಮೇಘನಾ ರಾಜ್‌ ಅವರು ತನ್ನ ತಾಯಿ ಪ್ರಮೀಳಾ ಜೋಶಾಯ್‌ ಅವರಿಗೆ ಬಿಗ್‌ ಗಿಫ್ಟ್‌ ನೀಡಿದ್ದಾರೆ.

ಇನ್ನೂ ಮಗಳು ನೀಡಿದ ಗಿಫ್ಟ್‌ ನೋಡಿ ಪ್ರಮೀಳಾ ಅವರು ಭಾವುಕರಾಗಿ, ಕಣ್ಣೀರು ಹಾಕಿದರು.

ಮೇಘನಾ ರಾಜ್‌ ಅವರು ತಮ್ಮ ಯೂಟ್ಯೂನ್‌ ಚಾನೆಲ್‌ನಲ್ಲಿ ಆಗಾಗ ತನ್ನ ವೈಯ್ಯಕ್ತಿಕ ಹಾಗೂ ಮಗನ ವಿಡಿಯೊಗಳನ್ನು ಪೋಸ್ಟ್‌ ಮಾಡಿದ್ದಾರೆ. ಇದೀಗ ಮೇಘನಾ ಅಮ್ಮ ಪ್ರಮೀಳಾ ಜೋಶಾಯ್ ಅವರಿಗೆ ಬಿಗ್‌ ಸರ್‌ಪ್ರೈಸ್‌ ನೀಡಿದ್ದಾರೆ. ಅಮ್ಮಂದಿರ ದಿನ ಹಾಗೂ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಚಿನ್ನದ ಓಲೆ ಗಿಫ್ಟ್‌ ಮಾಡಿದ್ದಾರೆ. ಓಲೆ ಕಂಡೊಡನೆ ಭಾವುಕರಾಗಿದ್ದಾರೆ ಪ್ರಮೀಳಾ.


ಯುಟ್ಯೂಬ್‌ನಲ್ಲಿ ಮೇಘನಾ ರಾಜ್‌ ಅವರು ಈ ವಿಡಿಯೊ ಪೋಸ್ಟ್‌ ಮಾಡಿದ್ದಾರೆ. ಮಗಳು ನೀಡಿದ ಗಿಫ್ಟ್‌ ಬಾಕ್ಸ್‌ ನೋಡಿ ಗೆಸ್‌ ಮಾಡಲು ಶುರು ಮಾಡುವ ಪ್ರಮೀಳಾ ಜೋಷಾಯ್ ಇದು ಲಿಪ್‌ಸ್ಟಿಕ್‌ ಇದು ರಿಂಗ್ ಇದು ಕಾಲಿ ಡಬ್ಬ ಎಂದು ಗೆಸ್‌ ಮಾಡುತ್ತಾರೆ. ಆಮೇಲೆ ಚಿನ್ನದ ಅಂಗಡಿ ಹೆಸರು ಓದಿ ಮೌನಿಯಾಗಿ ಭಾವುಕರಾಗುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ