ಉಗ್ರಾವತಾರ ತಾಳಿದ ಪ್ರಿಯಾಂಕ ಉಪೇಂದ್ರ

ಬುಧವಾರ, 13 ನವೆಂಬರ್ 2019 (10:00 IST)
ಬೆಂಗಳೂರು: ಪ್ರಿಯಾಂಕ ಉಪೇಂದ್ರ ಉಗ್ರಾವತಾರ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿರುವುದು ಈಗಾಗಲೇ ಗೊತ್ತಾಗಿದೆ. ಈಗ ಆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.


ಪೊಲೀಸ್ ಅಧಿಕಾರಿಯ ದಿರಿಸಿನಲ್ಲಿ ಪ್ರಿಯಾಂಕ ಉಗ್ರಾವತಾರ ನೋಡಿದರೆ ಥೇಟ್ ಮಾಲಾಶ್ರೀಯಂತೇ ಕಾಣುತ್ತಿದ್ದಾರೆ. ಈ ಸಿನಿಮಾದಲ್ಲಿ ಸಾಹಸ ದೃಶ್ಯಗಳಲ್ಲಿ ಪ್ರಿಯಾಂಕ ಅಭಿನಯಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ಜಿಮ್ ನಲ್ಲಿ ಬೆವರು ಸುರಿಸುತ್ತಿದ್ದಾರೆ.

ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ತಕ್ಕಂತೆ ಪ್ರಿಯಾಂಕ ಫಿಟ್ ಆಂಡ್ ಫೈನ್ ಆಗುತ್ತಿದ್ದಾರೆ.  ಇದುವರೆಗೆ ಕೌಟುಂಬಿಕ ಪಾತ್ರ ಮಾಡಿದ್ದ ಪ್ರಿಯಾಂಕಗೆ ಇದು ಸಂಪೂರ್ಣ ವಿಭಿನ್ನ ಪಾತ್ರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ