ಪ್ರಿಯಾಂಕ ಉಪೇಂದ್ರರ ಮಮ್ಮಿ ಸಿನಿಮಾ ಈ ದಾಖಲೆ ಮಾಡಿದ್ದು ನಿಜವಾ?

ಗುರುವಾರ, 8 ಡಿಸೆಂಬರ್ 2016 (08:35 IST)
ಬೆಂಗಳೂರು: ಪ್ರಿಯಾಂಕ ಉಪೇಂದ್ರ ಮತ್ತು ಯುವಿನಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ ಮಮ್ಮಿ ಕನ್ನಡ ಸಿನಿಮಾ ದಾಖಲೆಯ ಮೊತ್ತ ಗಳಿಕೆ ಮಾಡಿದೆಯಂತೆ. ಇದು ನಿಜವಾ. ಹೌದು ಎನ್ನುತ್ತಿದೆ ಮೂಲಗಳು.

ಈ ಚಿತ್ರ ಬಿಡುಗಡೆಯಾಗುವ ಮೊದಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಬಿಡುಗಡೆಯಾದ ಮೇಲೆ ಜನ ಮುಗಿ ಬಿದ್ದು ಸಿನಿಮಾ ನೋಡಿದ್ದರು. ಆದರೆ ಕನ್ನಡ ಸಿನಿಮಾವೊಂದು ಅದರಲ್ಲೂ ಸ್ಟಾರ್ ಗಳಿಲ್ಲದ ಮಹಿಳಾ ಪ್ರಧಾನ  ಚಿತ್ರವೊಂದು ಮೂರೇ ದಿನಕ್ಕೆ ಮೂರೂವರೆ ಕೋಟಿ ಕಲೆಕ್ಷನ್ ಮಾಡಿದೆಯಂತೆ.

ಇದನ್ನು ಸ್ವತಃ ನಾಯಕಿ ಪ್ರಿಯಾಂಕ ಉಪೇಂದ್ರ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಯುವ ನಿರ್ದೇಶಕ ಲೋಹಿತ್ ಎಚ್ ನಿರ್ದೇಶನದ ಚಿತ್ರ ಈ ಮಟ್ಟಿಗೆ ಗಳಿಕೆ ಮಾಡಿದೆ ಎಂದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಇಂತಹ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಬರುವುದು ಗ್ಯಾರಂಟಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ