ಅಭಿಮಾನಿ ಬಾಲಕಿಯ ಆಸೆ ಈಡೇರಿಸಿದ ಪವರ್ ಸ್ಟಾರ್

ಸೋಮವಾರ, 20 ಮಾರ್ಚ್ 2017 (12:47 IST)
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಅಭಿಮಾನಿಯ ಆಸೆ ಈಡೇರಿಸಿದ್ದಾರೆ. ಕಿಡ್ನಿ ವೈಫಲ್ಯದಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ದಾವಣಗೆರೆಯ ಚನ್ನಗಿರಿಯ ಬಾಲಕಿ ಪ್ರೀತಿ ಒಂದು ಬಾರಿಯಾದರೂ ಪುನೀತ್ ರಾಜ್ ಕುಮಾರ್ ಅವರನ್ನ ನೋಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ಇದೀಗ, ಪುನೀತ್ ಆ ಬಾಲಕಿಯ ಆಸೆ ಈಡೇರಿಸಿದ್ದಾರೆ.

ಶೂಟಿಂಗ್ ಸ್ಪಾಟ್`ಗೆ ಬಾಲಕಿಯನ್ನ ಕರೆಸಿಕೊಂಡಿರುವ ಪುನೀತ್ ರಾಜ್ ಕುಮಾರ್ ಬಾಲಕಿಗೆ ಸಂತಸ ನೀಡಿದ್ದಾರೆ. . ಆರೋಗ್ಯ ವಿಚಾರಿಸಿದ ಪುನೀತ್ ಚಿಕಿತ್ಸೆ ವೆಚ್ಚ ಭರಿಸುವ ಭರವಸೆಯನ್ನೂ ನೀಡಿದ್ದಾರೆ.

ಚನ್ನಗಿರಿಯ ಕುಮಾರ್ ಮತ್ತು ಮಂಜುಳಾ ದಂಪತಿಯ ಪುತ್ರಿಯಾಗಿರುವ ಪ್ರೀತಿಗೆ 2 ಕಿಡ್ನಿ ವಿಫಲಗೊಂಡಿವೆ. ಪ್ರತಿ ನಿತ್ಯ ಡಯಾಲಿಸಿಸ್ ನಡೆಯುತ್ತಿದೆ, ಕಷ್ಟದಲ್ಲಿರುವ ಕುಟುಂಬಕ್ಕೆ ಚಿಕಿತ್ಸೆ ವೆಚ್ಚ ಭರಿಸುವುದೂ ಸಾಧ್ಯವಾಗುತ್ತಿಲ್ಲ.

ಈ ಹಿಂದೆ ಶಿವರಾಜ್ ಕುಮಾರ್ ಸಹ ಕೊಳ್ಳೆಗಾಲದ ಅಭಿಮಾನಿಯನ್ನ ಕರೆಸಿಕೊಂಡು ತಮ್ಮನ್ನ ನೊಡಬೇಕೆಂಬ ಕೊನೆ ಆಸೆ ಈಡೇರಿಸಿದ್ದರು.

 

ವೆಬ್ದುನಿಯಾವನ್ನು ಓದಿ