ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವರ್ಷಕ್ಕೆ ಎರಡೇ ಸಿನಿಮಾ ಎಂಬ ನಿಯಮ ಹಾಕಿಕೊಂಡವರು. ಇಷ್ಟು ದಿನ ಅದನ್ನು ಕಟ್ಟು ನಿಟ್ಟಾಗಿ ಪಾಲಿಸಿದ್ದರು ಕೂಡಾ. ಆದರೆ ಅವರೇ ಹಾಕಿದ ರೂಲ್ಸ್ ನ್ನು ಅವರೇ ಮುರಿದಿದ್ದಾರೆ.
ಎಲ್ಲಾ ಸರಿ ಹೋದರೆ ಪುನೀತ್ ಈ ವರ್ಷ ಎರಡಲ್ಲ, ನಾಲ್ಕು ಸಿನಿಮಾಗಳಲ್ಲಿ ನಟಿಸಲಿದ್ದಾರೆ. ರಾಜಕುಮಾರ ಮತ್ತು ಪೂಜೈ ತಮಿಳು ಚಿತ್ರದ ರಿಮೇಕ್ ಸೇರಿದಂತೆ ಎರಡು ಸಿನಿಮಾಗಳಲ್ಲಿ ಪುನೀತ್ ನಟಿಸುತ್ತಿದ್ದಾರೆ. ಇನ್ನೊಂದು ಚೇತನ್ ಕುಮಾರ್ ಅವರ ಚಿತ್ರವೊಂದನ್ನು ಪುನೀತ್ ಒಪ್ಪಿಕೊಂಡಿದ್ದಾರೆ. ಜೇಮ್ಸ್ ಎಂದು ಚಿತ್ರಕ್ಕೆ ಹೆಸರಿಡಲಾಗಿದೆಯಂತೆ.
ಅದಲ್ಲದೆ ಮುಂದಿನ ವರ್ಷಾಂತ್ಯದಲ್ಲಿ ಮತ್ತೊಂದು ಪುನೀತ್-ಸೂರಿ ಕಾಂಬಿನೇಷನ್ ಚಿತ್ರವೂ ತೆರೆಗೆ ಬರುವ ಸಾಧ್ಯತೆಯಿದೆ ಎಂಬ ಗಾಸಿಪ್ ಹರಡಿದೆ. ಈಗಾಗಲೇ ದೊಡ್ಮನೆ ಹುಡುಗ, ಜಾಕಿ, ಅಣ್ಣಾ ಬಾಂಡ್ ಸೇರಿದಂತೆ ಮೂರು ಹಿಟ್ ಚಿತ್ರಗಳನ್ನು ಕೊಟ್ಟ ಈ ಜೋಡಿ ಮತ್ತೊಂದು ಸಿನಿಮಾ ಮಾಡಲು ತಯಾರಾಗಿದೆ ಎನ್ನಲಾಗಿದೆ. ವಿವರಗಳಿಗೆ ಕಾದು ನೋಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ