ಬೆಂಗಳೂರು: ದಿನಗಳು ಎಷ್ಟು ಬೇಗನೇ ಸರಿದುಹೋಗುತ್ತವೆ. ನಿನ್ನೆ ಮೊನ್ನೆಯಷ್ಟೇ ನಮ್ಮ ಜೊತೆಗಿದ್ದ ಅಪ್ಪು ನಮ್ಮನ್ನಗಲಿ ಇಂದಿಗೆ ಒಂದು ವರ್ಷವೇ ಕಳೆದುಹೋಗಿದೆ.
ಕಳೆದ ವರ್ಷ ಇದೇ ದಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯ ಸ್ತಂಬನಕ್ಕೊಳಗಾಗಿ ಸಾವನ್ನಪ್ಪಿದ್ದರು. ಅಷ್ಟೊಂದು ಫಿಟ್ ಆಗಿದ್ದ ಅಪ್ಪು ಇದ್ದಕ್ಕಿದ್ದಂತೆ ನಮ್ಮನ್ನಗಲಿದ್ದು, ಇಡೀ ಕರುನಾಡನ್ನು ದುಃಖದ ಮಡಿಲಲ್ಲಿ ಮುಳುಗಿಸಿತ್ತು.
ಎರಡು ದಿನದ ಬಳಿಕ ಪುನೀತ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಲಕ್ಷಾಂತರ ಮಂದಿ ಬಂದು ಪುನೀತ್ ಅಂತಿಮ ದರ್ಶನ ಮಾಡಿದ್ದರು. ಬಳಿಕ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರೀ ಗೌರವಗಳೊಂದಿಗೆ ಡಾ.ರಾಜ್ ಸಮಾಧಿ ಪಕ್ಕದಲ್ಲೇ ಪುನೀತ್ ರ ಅಂತಿಮ ಕ್ರಿಯೆ ನಡೆಸಲಾಯಿತು.
ಇಂದು ಪುನೀತ್ ನಿಧನವಾಗಿ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಕುಟುಂಬಸ್ಥರು, ಅಭಿಮಾನಿಗಳು ಸಮಾಧಿಗೆ ಬಂದು ಪೂಜೆ ಸಲ್ಲಿಸಲಿದ್ದಾರೆ. ನಿನ್ನೆ ಅಪ್ಪು ಕೊನೆಯ ಚಿತ್ರ ಗಂಧದ ಗುಡಿ ರಿಲೀಸ್ ಆಗಿದ್ದು, ನಿನ್ನೆಯಿಂದ ಇಡೀ ದಿನ ಪುನೀತ್ ಸಮಾಧಿಗೆ ಜನಸಾಗರವೇ ಹರಿದುಬರುತ್ತಿದೆ.
ಪುನೀತ್ ದೈಹಿಕವಾಗಿ ನಮ್ಮನ್ನಗಲಿದರೂ ಅವರನ್ನು ಇಂದಿಗೂ ಅಭಿಮಾನಿಗಳ ಮನದಲ್ಲಿ ಜೀವಂತವಾಗಿದ್ದಾರೆ. ಅವರನ್ನು ಜನ ಇಂದಿಗೂ ನೆನೆಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ಮನದಲ್ಲಿ ಅವರು ಸದಾ ಜೀವಂತವಾಗಿದ್ದಾರೆ.