ಪವರ್ ಸ್ಟಾರ್ ಪುನೀತ್ ಮೇಲಿನ ಅಭಿಮಾನದಿಂದ ತವರಿನ ಮಂದಿ ಮಾಡಿದ್ದೇನು ಗೊತ್ತಾ?
ತಮ್ಮ ಸಾವಿನಲ್ಲೂ ನೇತ್ರದಾನ ಮಾಡಿ ಹಲವರಿಗೆ ಪ್ರೇರಣೆಯಾಗಿರುವ ಅಪ್ಪು ಇದೀಗ ಹಲವು ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆಯಾಗಿದ್ದಾರೆ.
ಡಾ.ರಾಜ್ ಕುಟುಂಬದ ತವರು ಹೊಸಪೇಟೆಯಲ್ಲಿ ಒಂದೇ ದಿನ 1800 ಕ್ಕೂ ಹೆಚ್ಚು ಮಂದಿ ನೇತ್ರದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ಅಲ್ಲದೆ, 300 ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ್ದಾರೆ. ಆ ಮೂಲಕ ತಮ್ಮೂರ ಹುಡುಗನ ಮೇಲಿನ ಅಭಿಮಾನವನ್ನು ವಿಶಿಷ್ಟವಾಗಿ ತೋರಿಸಿಕೊಟ್ಟಿದ್ದಾರೆ.