ಮಣ್ಣಲ್ಲಿ ಸೇರಿಕೊಂಡ ‘ಪವರ್’: ಪುನೀತ್ ಗೆ ಕಣ್ಣೀರ ವಿದಾಯ
ಇಂದು ಬೆಳಿಗ್ಗೆ ಈಡಿಗ ಸಂಪ್ರದಾಯದಂತೆ ಪುನೀತ್ ಅಂತಿಮ ವಿಧಿ ವಿಧಾನಗಳು ನಡೆದವು. ವಿನಯ್ ರಾಘವೇಂದ್ರ ರಾಜ್ ಕುಮಾರ್ ಅಂತಿಮ ವಿಧಿ ವಿಧಾನ ನೆರವೇರಿಸಿದರು.
ಚಿತ್ರರಂಗ, ರಾಜಕೀಯ ಗಣ್ಯರು ಮತ್ತು ಸಾವಿರಾರು ಮಂದಿ ಅಭಿಮಾನಿಗಳು ಈ ಭಾವುಕ ಕ್ಷಣಕ್ಕೆ ಸಾಕ್ಷಿಯಾದರು. ಪುನೀತ್ ಕುಟುಂಬಸ್ಥರು ಅಳುತ್ತಲೇ ಅಂತಿಮ ವಿದಾಯ ಹೇಳಿದರು.