‘ದಿಯಾ’ ಸಿನಿಮಾ ನಾಯಕ ಪೃಥ್ವಿ ಅಂಬರ್ ಗೆ ಭರ್ಜರಿ ಆಫರ್ ಕೊಟ್ಟ ಪುನೀತ್ ರಾಜಕುಮಾರ್

ಮಂಗಳವಾರ, 5 ಮೇ 2020 (09:36 IST)
ಬೆಂಗಳೂರು: ಇತ್ತೀಚೆಗೆ ಸದ್ದು ಮಾಡಿದ ಹೊಸಬರ ಚಿತ್ರದಲ್ಲಿ  ‘ದಿಯಾ’ ಕೂಡಾ ಒಂದು. ದಿಯಾ ಸಿನಿಮಾದಲ್ಲಿ ನಾಯಕರಾಗಿ ಅಭಿನಯಿಸಿದ್ದ ಪೃಥ್ವಿ ಅಂಬರ್ ಅಭಿನಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು.


ಸ್ಯಾಂಡಲ್ ವುಡ್ ಗೆ ಹೊಸ ಹೀರೋ ಸಿಕ್ಕ ಎಂದು ಎಲ್ಲರೂ ಮಾತಾಡುವಂತೆ ಅಭಿನಯಿಸಿದ್ದರು ಪೃಥ್ವಿ. ಇದೀಗ ಅವರ ನಟನೆಯನ್ನು ಸ್ವತಃ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೂ ಮೆಚ್ಚುಗೆಯಾಗಿದೆ.

ದಿಯಾ ಸಿನಿಮಾ ನೋಡಿದ ಪುನೀತ್ ಈ ಸಿನಿಮಾದಲ್ಲಿ ಪೃಥ್ವಿ ಅಭಿನಯವನ್ನು ಮೆಚ್ಚಿ ಮುಂದಿನ ದಿನದಲ್ಲಿ ನಮ್ಮ ಬ್ಯಾನರ್ ನ ಸಿನಿಮಾವೊಂದರಲ್ಲಿ ನಿಮಗೆ ಪಕ್ಕಾ ಒಂದು ಪಾತ್ರ ಕೊಡುವುದಾಗಿ ಮಾತುಕೊಟ್ಟಿದ್ದಾರಂತೆ. ಈ ಮೂಲಕ ಹೊಸಬರಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ ಪುನೀತ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ