ಪ್ರೈಮ್ ವಿಡಿಯೋನಲ್ಲಿ ಇನ್ನೂ ಪುಷ್ಪ ಸಿನಿಮಾ ಬಂದಿಲ್ಲವೇಕೆ? ಸಮಯ ಇಲ್ಲಿದೆ ನೋಡಿ

ಶುಕ್ರವಾರ, 7 ಜನವರಿ 2022 (16:47 IST)
ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿರುವ ಬಹುನಿರೀಕ್ಷಿತ ಪುಷ್ಪ ಸಿನಿಮಾ ಇಂದಿನಿಂದ ಒಟಿಟಿ ಫ್ಲ್ಯಾಟ್ ಫಾರಂ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿರುವುದಾಗಿ ಘೋಷಣೆಯಾಗಿದೆ.

ಆದರೆ ಬೆಳಗಿನಿಂದ ಪುಷ್ಪ ಸಿನಿಮಾಗಾಗಿ ಕಾದು ಬೇಸರವಾಗಿದ್ದರೆ ಸ್ವಲ್ಪ ತಾಳ್ಮೆ ತಂದುಕೊಳ್ಳಿ. ಪುಷ್ಪ ಸಿನಿಮಾ ಇಂದೇ ಪ್ರೈಮ್ ವಿಡಿಯೋನಲ್ಲಿ ಲಭ್ಯವಿರಲಿದೆ.

ಆದರೆ ರಾತ್ರಿ 8 ಗಂಟೆ ಬಳಿಕ ವೀಕ್ಷಣೆಗೆ ಲಭ‍್ಯವಾಗಲಿದೆ. ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ ಈ ಸಿನಿಮಾ ಈಗಾಗಲೇ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ