ಫಸ್ಟ್ ನೈಟ್ ಲ್ಲಿ ಏನು ಮಾಡ್ತೀರಾ? ರಚಿತಾ ರಾಂ ಪ್ರಶ್ನೆಗೆ ಪತ್ರಕರ್ತ ತಬ್ಬಿಬ್ಬು!

ಬುಧವಾರ, 10 ನವೆಂಬರ್ 2021 (09:11 IST)
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಂ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಬೋಲ್ಡ್ ಅಭಿನಯದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ್ದು ಎಲ್ಲರೂ ಹುಬ್ಬೇರುವಂತೆ ಮಾಡಿದೆ.

‘ಲವ್ ಯೂ ರಚ್ಚು’ ಸಿನಿಮಾದ ಮುದ್ದು ನೀನು ಎಂಬ ರೊಮ್ಯಾಂಟಿಕ್ ಹಾಡೊಂದರ ವಿಡಿಯೋ ಈಗ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ರಚಿತಾ ನಾಯಕ ಅಜೇಯ್ ರಾವ್ ಜೊತೆ ಫಸ್ಟ್ ನೈಟ್ ದೃಶ್ಯದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ರಚಿತಾ ಉಪೇಂದ್ರ ಜೊತೆಗಿನ ಐ ಲವ್ ಯೂ ಸಿನಿಮಾದಲ್ಲಿ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಂಡು ಬಳಿಕ ಕಣ್ಣೀರು ಹಾಕಿ ಇನ್ಮುಂದೆ ಇಂತಹ ಪಾತ್ರ ಮಾಡಲ್ಲ ಎಂದಿದ್ದು ವಿವಾದವೇ ಆಗಿತ್ತು. ಆದರೆ ಈಗ ಇಂತಹ ಪಾತ್ರದಲ್ಲಿ ಮಾಡಲ್ಲ ಎಂದಿದ್ದ ರಚಿತಾ ಈ ಸಿನಿಮಾದಲ್ಲಿ ಮತ್ತೆ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರಿಗೆ ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ್ದರು.

ಇದಕ್ಕೆ ರಚಿತಾ ‘ಫಸ್ಟ್ ನೈಟ್ ಲ್ಲಿ ನೀವು ಏನು ಮಾಡ್ತೀರಾ? ಸಾಮಾನ್ಯವಾಗಿ ಎಲ್ಲರೂ ಫಸ್ಟ್ ನೈಟ್ ನಲ್ಲಿ ಏನು ಮಾಡ್ತೀರಿ? ಈ ಪ್ರಶ್ನೆ ಕೇಳುತ್ತಿರುವುದಕ್ಕೆ ಐ ಸಾರಿ. ಆದರೂ ಕೇಳುತ್ತಿದ್ದೇನೆ. ಎಲ್ಲರೂ ರೊಮ್ಯಾನ್ಸ್ ಮಾಡ್ತಾರಲ್ವಾ? ಅದನ್ನೇ ಇಲ್ಲಿ ಮಾಡಿದ್ದಾರಷ್ಟೇ. ಆ ರೀತಿ ಮಾಡಲ್ಲ ಎಂದು ಮಾಡಿದ್ದೇನೆ ಎಂದರೆ ಅದಕ್ಕೆ ಏನೋ ಕಾರಣವಿರಬೇಕು ಅಲ್ವಾ? ಅದನ್ನು ನೀವು ಸಿನಿಮಾ ನೋಡಿ ತಿಳಿದುಕೊಳ್ಳಬೇಕು’ ಎಂದು ರಚಿತಾ ಬೋಲ್ಡ್ ಆಗಿಯೇ ಉತ್ತರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ