ಅಪ್ಪು ಮಗನೇ ನನಗೂ ಕೆಲಸ ಕೊಟ್ಟೆ: ರಾಘಣ್ಣ ಭಾವುಕ ಮಾತು
ಪುನೀತ್ ರನ್ನು ಸದಾ ಮಗನಂತೇ ಕಾಣುವ ರಾಘಣ್ಣ ಈಗ ಅಪ್ಪು ಅಗಲುವಿಕೆಯ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಪ್ಪು ಮಗನೇ ನಾನೊಬ್ಬ ನಿರುದ್ಯೋಗಿಯಾಗಿದ್ದೆ. ನಿನ್ನ ಸಮಾಜ ಸೇವೆ ಮುಂದುವರಿಸುವ ಉದ್ಯೋಗ ನನಗೆ ನೀನು ನೀಡಿದೆ. ನೀನು ಮಾಡುತ್ತಿದ್ದ ಕೆಲಸಗಳು ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ. ಕಿವುಡ, ಮೂಗನಾಗಿ ಸಮಾಜ ಸೇವೆ ಮಾಡುವಾಗ ನಿನ್ನ ಚಿಂತನೆಗಳಿಂದ ನನಗೆ ಶಕ್ತಿ ಕೊಟ್ಟಿರುವೆ ಎಂದು ರಾಘಣ್ಣ ಭಾವುಕರಾಗಿ ಬರೆದುಕೊಂಡಿದ್ದಾರೆ.