ಜಾಮೀನು ಸಿಕ್ಕರೂ ನಟಿ ರಾಗಿಣಿಗೆ ಜೈಲಿನಿಂದ ಹೊರಬರಲು ಸಂಕಷ್ಟ

ಭಾನುವಾರ, 24 ಜನವರಿ 2021 (09:23 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಜಾಮೀನು ಪಡೆದರೂ ನಟಿ ರಾಗಿಣಿಗೆ ಜೈಲಿನಿಂದ ಹೊರಬರಲು ಸಂಕಷ್ಟ ಎದುರಾಗಿದೆ.


ಮೊನ್ನೆಯೇ ಸುಪ್ರೀಂಕೋರ್ಟ್ ಜಾಮೀನು ನೀಡಿದರೂ ರಾಗಿಣಿಗೆ ಇನ್ನೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಸುಪ್ರೀಂಕೋರ್ಟ್ ಆದೇಶ ಪ್ರತಿ ನಿನ್ನೆ ಮಧ್ಯಾಹ್ನವಷ್ಟೇ ಬೆಂಗಳೂರು ತಲುಪಿದೆ. ಬಳಿಕ ಎನ್ ಡಿಪಿಎಸ್ ಕೋರ್ಟ್ ಗೆ ಆದೇಶ ಪ್ರತಿಯನ್ನು ನೀಡಲಾಗಿದೆ. ಇಂದು ಭಾನುವಾರವಾದ್ದರಿಂದ ಅನಿವಾರ್ಯವಾಗಿ ಜೈಲಿನಲ್ಲೇ ಕಳೆಯಬೇಕಿದೆ. ಕಾನೂನು ಪ್ರಕ್ರಿಯೆಗಳನ್ನು ಪೂರ್ತಿ ಮಾಡಲು ನಾಳೆಯಷ್ಟೇ ಸಾಧ್ಯವಾಗಲಿದೆ. ಅದಾದ ಬಳಿಕವಷ್ಟೇ ಜೈಲಿನಿಂದ ಹೊರಬರಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ