ಬಾಹುಬಲಿ-2 ರಿಲೀಸ್`ಗೂ ಮುನ್ನ ಪ್ರಭಾಸ್`ಗೆ ರಾಜಮೌಳಿ ಗಿಫ್ಟ್

ಮಂಗಳವಾರ, 25 ಏಪ್ರಿಲ್ 2017 (09:55 IST)
ಭಾರತೀಯ ಚಿತ್ರರಂಗ ಕಂಡ ಪ್ರಚಂಡ ನಿರ್ದೇಶಕರ ಸಾಲಿನಲ್ಲಿ ನಿಲ್ಲುವವರು ಎಸ್.ಎಸ್. ರಾಜಮೌಳಿ. 2 ಚಿತ್ರ ಮಾಡುವುದಕ್ಕೆ ರಾಜಮೌಳಿ ತೆಗೆದುಕೊಂಡ ಸಮಯ ಬರೋಬ್ಬರಿ 5 ವರ್ಷ. ಅಂತಹ ಅಭೂತಪೂರ್ವ ಚಿತ್ರ ಮಾಡಲು ರಾಜಮೌಳಿ ಜೊತೆ ಸಹಕರಿಸಿದ್ದು, ನಟ ಪ್ರಭಾಸ್.

5 ವರ್ಷ ಒಂದೇ ಚಿತ್ರಕ್ಕೆ ಕಾಲ್ ಶೀಟ್ ಕೊಟ್ಟು ಬದ್ಧತೆ ಪ್ರದರ್ಶಿಸಿದ ಪ್ರಭಾಸ್`ಗೆ ಬಾಹುಬಲಿ-2 ರಿಲೀಸ್`ಗೂ ಮುನ್ನವೇ ಭರ್ಜರಿ ಗಿಫ್ಟ್ ಕೊಡಲು ರಾಜಮೌಳಿ ನಿರ್ಧರಿಸಿದ್ದಾರೆ. ಚಿತ್ರದಲ್ಲಿ ಬಾಹುಬಲಿ ಹಾಕಿಕೊಂಡಿದ್ದ ಕವಚವನ್ನ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.

ಬಾಹುಬಲಿಯ ಶ್ರಮಕ್ಕೆ ಪ್ರತೀಕವಾಗಿ ಈ ಗಿಫ್ಟ್ ನೀಡಲು ರಾಜಮೌಳಿ ನಿರ್ಧರಿಸಿದ್ದಾರೆ. ಚಿತ್ರಕ್ಕಾಗಿ ಪ್ರಭಾಸ್ ದೇಹವನನ ಹುರಿಗೊಳಿಸಿದ ರೀತಿ ಅತ್ಯಂತ ಗಮನಾರ್ಹವಾದದ್ದು, ವಾರಿಯರ್ ಫಿಟ್ನೆಸ್ ನಿರ್ವಹಣೆಗೆ ಪ್ರಭಾಸ್ ಮನೆಯಲ್ಲೇ ವಾಲಿಬಾಲ್ ಕೋರ್ಟ್ ಸ್ಥಾಪಿಸಿಕೊಂಡಿದ್ದರು. 82 ಕೆ.ಜಿ ತೂಕವಿದ್ದ ಪ್ರಭಾಸ್ ಬಾಹುಬಲಿ ಪಾತ್ರಕ್ಕಾಗಿ 105 ಕೆ.ಜಿಗೆ ಶಿವುಡು ಪಾತ್ರಕ್ಕಾಗಿ 85 ಕೆ.ಜಿಗೆ ದೇಹವನ್ನ ಹುರಿಗೊಳಿಸಿದ್ದರು.

ಛತ್ರಪತಿ ಚಿತ್ರದ ಬಳಿಕ ನಾನು ಮತ್ತು ಪ್ರಭಾಸ್ ಅತ್ಯಂತ ಆತ್ಮೀಯ ಸ್ನೇಹಿತರಾದೆವು. ಇಂತಹ ದೊಡ್ಡ ಚಿತ್ರ ಮಾಡುವ ಚಿಂತನೆ ಬಂದಾಗ ನನ್ನ ಕಣ್ಣ ಮುಂದೆ ಬಂದದ್ದು ಪ್ರಭಾಸ್ ಮಾತ್ರ. ನನ್ನ ಪ್ರಸ್ತಾವನೆಗೆ ಒಪ್ಪಿಕೊಂಡ ಪ್ರಭಾಸ್ 5 ವರ್ಷ ಕಾಲ್ ಶಿಟ್ ಕೊಟ್ಟು, ಬದ್ಧತೆ ಪ್ರದರ್ಶಿಸಿದರು ಎಂದು ಹಾಡಿ ಹೊಗಳಿದ್ದಾರೆ.


ವೆಬ್ದುನಿಯಾವನ್ನು ಓದಿ