ವೈದ್ಯರ ಭೇಟಿಗೆ ಅಮೆರಿಕಾಗೆ ತೆರಳಿದ ‘ತಲೈವಾ’ ರಜನಿ

ಬುಧವಾರ, 16 ಜೂನ್ 2021 (10:47 IST)
ಚೆನ್ನೈ: ಆರೋಗ್ಯ ತಪಾಸಣೆಗಾಗಿ ಸೂಪರ್ ಸ್ಟಾರ್ ರಜನೀಕಾಂತ್ ಕುಟುಂಬ ಸಮೇತ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದಾರೆ.


ಅವರು ಆರೋಗ್ಯ ತಪಾಸಣೆಗಾಗಿ ತೆರಳಿರುವ ವಿಚಾರ ಅಭಿಮಾನಿಗಳಿಗೆ ಆತಂಕ ತಂದಿದೆ. ಆದರೆ ಇದು ಸಾಮಾನ್ಯ ಆರೋಗ್ಯ ತಪಾಸಣೆಗೆ ಎನ್ನಲಾಗಿದೆ. ಕೆಲವು ದಿನಗಳ ವಿಶ್ರಾಂತಿಯ ನಂತರ ಮತ್ತೆ ಅವರು ಭಾರತಕ್ಕೆ ಮರಳಲಿದ್ದಾರೆ.

ಅನ್ನಾಥೆ ಚಿತ್ರದ ಶೂಟಿಂಗ್ ಮುಗಿಸಿರುವ ರಜನಿ ಈಗ ಕೆಲವು ದಿನಗಳ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಆಗಾಗ ಅವರು ಅಮೆರಿಕಾಗೆ ತೆರಳಿ ತಮ್ಮ ವೈದ್ಯರ ಬಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಾರೆ. ಇದೂ ಕೂಡಾ ಸಾಮಾನ್ಯ ಭೇಟಿ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ