Rakesh Poojari: ರಾಕೇಶ್ ಪೂಜಾರಿ ಸಾವು ಕಾಂತಾರ ಸಿನಿಮಾ ಮೇಲೆ ಅಪವಾದ
ಮಂಗಳೂರು ಮೂಲದ ರಾಕೇಶ್ ಪೂಜಾರಿ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯತೆ ಗಳಿಸಿದ್ದರು. ಬಳಿಕ ಅನೇಕ ಶೋ, ರಂಗಭೂಮಿ ಮೂಲಕ ಜನರ ಮನಸ್ಸು ಗೆದ್ದಿದ್ದರು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಮೆಹಂದಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಹೃದಯಾಘಾತಕ್ಕೆ ಒಳಗಾದ ರಾಕೇಶ್ ಪೂಜಾರಿ ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ ಘಟನೆ ಸಂಭವಿಸಿದೆ ಎನ್ನಲಾಗಿದೆ.
ವಿಪರ್ಯಾಸವೆಂದರೆ ರಾಕೇಶ್ ಇತ್ತೀಚೆಗಷ್ಟೇ ಕಾಂತಾರ ಸಿನಿಮಾ ಶೂಟಿಂಗ್ ಮುಗಿಸಿ ಬಂದಿದ್ದರು. ಹೀಗಾಗಿ ಈಗ ಕಾಂತಾರ ಸಿನಿಮಾ ಮೇಲೆ ಮತ್ತೊಂದು ಅಪವಾದ ಬಂದಿದೆ. ಮೊನ್ನೆಯಷ್ಟೇ ಕಾಂತಾರ ಸಿನಿಮಾದ ಜ್ಯೂನಿಯರ್ ಕಲಾವಿದರೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಇದೀಗ ರಾಕೇಶ್ ಪೂಜಾರಿ ಸಾವನ್ನಪ್ಪಿರುವವ ಬೆನ್ನಲ್ಲೇ ಕಾಂತಾರ ಸಿನಿಮಾದ ಅಪಶಕುನವೇ ಎಂಬ ಸುದ್ದಿ ಹಬ್ಬಿದೆ.