ರಕ್ಷಿತ್ ಶೆಟ್ಟಿ-ರಶ್ಮಿಕಾ ನಡುವೆ ಪ್ರೀತಿ ತಂದಿಟ್ಟವರಾರು?

ಶುಕ್ರವಾರ, 23 ಜೂನ್ 2017 (11:04 IST)
ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ರಿಯಲ್ ಲೈಫ್ ನಲ್ಲೂ ಒಂದಾಗುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಈ ಜೋಡಿ ಒಂದಾಗಿದ್ದು ಹೇಗೆ ಎಂದು ರಕ್ಷಿತ್ ಬಾಯ್ಬಿಟ್ಟಿದ್ದಾರೆ.

 
ತಮ್ಮ ಪ್ರೀತಿಯನ್ನು ಮೊದಲು ತಮಗೇ ಗೊತ್ತಾಗುವ ಮೊದಲು ಹೇಳಿದ್ದು ಮಾಧ್ಯಮಗಳು ಎಂದಿದ್ದಾರೆ ರಕ್ಷಿತ್. ಹೀಗಾಗಿ ತಮ್ಮಿಬ್ಬರ ನಡುವೆ ಪ್ರೀತಿ ತಂದಿಟ್ಟವರು ಮಾಧ್ಯಮಗಳೇ. ಅದಕ್ಕೆ ನಿಮಗೆ ಥ್ಯಾಂಕ್ಸ್ ಎಂದಿದ್ದಾರೆ.

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾ ಭಾಗದ ಚಿತ್ರೀಕರಣ ಮುಗಿಯುವವರೆಗೂ ಅವರ ಮಧ್ಯೆ ಏನೂ ಇರಲಿಲ್ಲವಂತೆ. ಅದಾದ ಮೇಲೆಯೂ ಒಮ್ಮೆಯೂ ಐಲವ್ ಯೂ ಅಂತ ನಾವು ಹೇಳಿಲ್ಲ. ಆದರೆ ನನನ್ನು ನೋಡಲು ರಕ್ಷಿತಾ ಸಿನಿಮಾ ಸೆಟ್ ಗೆ ಬರಲಾರಂಭಿಸಿದ ಮೇಲೆ ಅದೇನೋ ಬಾಂಧವ್ಯ ಬೆಳೆಯಿತು ಎಂದಿದ್ದಾರೆ ರಕ್ಷಿತ್.

ಈ ನಡುವೆ ಎರಡೂ ಮನೆಯವರಿಗೆ ಇವರಿಬ್ಬರ ನಡುವೆ ಸಮ್ ಥಿಂಗ್ ಇದೆ ಎಂದು ಗೊತ್ತಾಗಿದ್ದೂ ಮಾಧ್ಯಮಗಳಿಂದಲೇ ಅಂತೆ. ನಂತರ ಎರಡೂ ಮನೆಯವರ ನಡುವೆ ಮಾತುಕತೆ ನಡೆದು ಮದುವೆಯೂ ಫಿಕ್ಸ್ ಆಗಿದೆ. ಆದರೆ ತಮ್ಮ ಪ್ರೀತಿಯ ಹುಡುಗಿಗೆ ಒಮ್ಮೆಯೂ ರಕ್ಷಿತ್ ಐ ಲವ್ ಯೂ ಎಂದು ಹೇಳಿಯೇ ಇಲ್ಲವಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ