ಕುಟುಂಬ ಸಮೇತ ಕಾಳಹಸ್ತಿ ದೇವಾಲಯಕ್ಕೆ ರಕ್ಷಿತ್ ಶೆಟ್ಟಿ ಭೇಟಿ

ಶನಿವಾರ, 8 ಏಪ್ರಿಲ್ 2023 (17:15 IST)
Photo Courtesy: Twitter
ಬೆಂಗಳೂರು: ಸಿನಿಮಾ ಕೆಲಸಗಳ ನಡುವೆಯೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಆಂಧ್ರದ ಕಾಳಹಸ್ತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ತಾಯಿ ಹಾಗೂ ಆಪ್ತರ ಜೊತೆ ರಕ್ಷಿತ್ ಶೆಟ್ಟಿ ಕಾಳಹಸ್ತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಶೂಟಿಂಗ್ ಮುಗಿಸಿರುವ ರಕ್ಷಿತ್ ಶೆಟ್ಟಿ ಈಗ ಟೆಂಪಲ್ ರನ್ ನಡೆಸಿದ್ದಾರೆ.

ತಮ್ಮ ಹೊಸ ಲುಕ್ ಬಹಿರಂಗವಾಗಬಾರದು ಎಂಬ ಕಾರಣಕ್ಕೆ ರಕ್ಷಿತ್ ಹೆಚ್ಚಾಗಿ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಇತ್ತೀಚೆಗೆ ತಮ್ಮ ಹುಟ್ಟೂರು ಉಡುಪಿಯಲ್ಲಿ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ