ಕಳೆದುಕೊಂಡಿದ್ದನ್ನು ಮರಳಿ ಪಡೆದ ರಕ್ಷಿತ್ ಶೆಟ್ಟಿ

ಬುಧವಾರ, 14 ಅಕ್ಟೋಬರ್ 2020 (09:53 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಳೆದು ಹೋಗಿದ್ದನ್ನು ಮರಳಿ ಪಡೆದಿದ್ದಾರಂತೆ. ಅಷ್ಟಕ್ಕೂ ಅವರು ಕಳೆದುಕೊಂಡಿದ್ದು ಏನು ಗೊತ್ತಾ?


10 ವರ್ಷದ ಹಿಂದೆ ರಕ್ಷಿತ್ ಶೆಟ್ಟಿ ‘ಕನ್ಫೆಷನ್ ಆಫ್ ಡಸ್ಟ್ ಬಿನ್’ ಎಂಬ ಶಾರ್ಟ್ ಮೂವಿ ಒಂದನ್ನು ಶೂಟೇಜ್ ಮಾಡಿದ್ದರಂತೆ. ಆದರೆ ಆ ಫೂಟೇಜ್ ಕಳೆದು ಹೋಗಿತ್ತಂತೆ. ಈಗ ಅದು ಮರಳಿ ಸಿಕ್ಕಿದ್ದು, ಅದಕ್ಕೆ ಹೊಸ ರೂಪ ಕೊಟ್ಟು ಬಿಡುಗಡೆ ಮಾಡಲು ರಕ್ಷಿತ್ ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಸಂಗೀತ ನಿರ್ದೇಶಕ ಅಜನೀಶ್ ಲೋಕೇಶ್ ಜತೆ ಎಡಿಟಿಂಗ್ ಕೆಲಸ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ