ಜಲ್ಲಿಕಟ್ಟುಗೆ ರಾಮ್ ಗೋಪಾಲ್ ವರ್ಮಾ ತೀವ್ರ ವಿರೋಧ

ಶನಿವಾರ, 21 ಜನವರಿ 2017 (15:15 IST)
ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಇದೀಗ ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟುಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಕೇಂದ್ರ ಸರಕಾರ ಸುಗ್ರೀವಾಜ್ಞೆ ಮೂಲಕ ಜಲ್ಲಿಕಟ್ಟು ಮೇಲಿನ ನಿಷೇಧವನ್ನು ತೆರವುಗೊಳಿಸಿದೆ.
 
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಮ್ ಗೋಪಾಲ್ ವರ್ಮಾ, ಜಲ್ಲಿಕಟ್ಟುಗೆ ಸರಕಾರ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಗರಂ ಆಗಿದ್ದಾರೆ. ಟ್ವಿಟ್ಟರ್ ಕಿಂಗ್ ಎಂದೇ ಖ್ಯಾತರಾದವರು ರಾಮ್ ಗೋಪಾಲ್ ವರ್ಮಾ. ಸಿನಿಮಾದಲ್ಲಿ ಕಾಗೆ, ನಾಯಿ ತೋರಿಸಲು ನಾನಾ ನೀತಿನಿಯಮಗಳನ್ನು ಹಾಕುವ ಸರಕಾರ ಜಲ್ಲಿಕಟ್ಟುವಿನಂತ ಕ್ರೂರ ಕ್ರೀಡೆಗೆ ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ.
 
ಸಂಸ್ಕೃತಿ, ಸಾಂಪ್ರದಾಯದ ಹೆಸರಿನಲ್ಲಿ ಜನರ ವೈಯಕ್ತಿಕ ಮನರಂಜನೆಗಾಗಿ ಪ್ರಾಣಿಗಳನ್ನು ಹಿಂಸಿಸುತ್ತಿರುವುದು ಹೇಯ. ಜಲ್ಲಿಕಟ್ಟು ಉಗ್ರವಾದಕ್ಕಿಂತ ಕೆಟ್ಟದ್ದು. ಸಂಪ್ರದಾಯದ ಹೆಸರಿನಲ್ಲಿ ಮೂಕ ಪ್ರಾಣಿಗಳನ್ನು ಹಿಂಸಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ