ಶಶಿಕಲಾ ಜೈಲು ಕೊಠಡಿಯಲ್ಲಿ ಜಯಲಲಿತಾ ಆತ್ಮ

ಶನಿವಾರ, 18 ಫೆಬ್ರವರಿ 2017 (13:11 IST)
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ ಜಯಲಲಿತಾ, ಆಕೆಯ ಆಪ್ತೆ ಶಶಿಕಲಾ ನಡುವಿನ ಸಂಬಂಧದ ಬಗ್ಗೆ ತಿಳಿದುಕೊಂಡು ಚಕಿತನಾಗಿದ್ದೇನೆ ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಿಳಿಸಿದ್ದಾರೆ. ಜಯಲಲಿತಾ ಮತ್ತು ಶಶಿಕಲಾ ಜೀವನಕಥೆಯಾಧಾರವಾಗಿ ’ಶಶಿಕಲಾ’ ಎಂಬ ಹೆಸರಿನ ಚಿತ್ರ ತೆಗೆಯುತ್ತಿರುವುದಾಗಿ ವರ್ಮಾ ತಿಳಿಸಿದ್ದಾರೆ.
 
 
ಈ ರೀತಿಯ ವಿವಾದಾತ್ಮಕ, ಭೂಗತ, ದೆವ್ವದ ಚಿತ್ರಗಳಿಗೆ ರಾಮ್ ಗೋಪಾಲ್ ವರ್ಮಾ ಜನಪ್ರಿಯರಾದವರು. ಈಗ ಅವರ ಕಣ್ಣು ಶಶಿಕಲಾ ಮೇಲೆ ಬಿದ್ದಿದೆ. ಜಯಲಲಿತಾ ಆತ್ಮ ಶಶಿಕಲಾ ಇರುವ ಜೈಲು ಕೊಠಡಿಗೆ ಬರಲಿದೆ ಎಂಬ ಬಲವಾದ ನಂಬಿಕೆ ನನಗಿದೆ. ಜಯಲಲಿತಾ, ಶಶಿಕಲಾ ಸಂಬಂಧದ ಹಿಂದಿನ ಸಂಗತಿಗಳ ಬಗ್ಗೆ ಪೋಯೆಸ್ ಗಾರ್ಡನ್‌ನಲ್ಲಿ ಕೆಲಸ ಮಾಡುವ ಕೆಲವರು ತಿಳಿಸಿದ ವಿಷಯಗಳು ನನ್ನನ್ನು ದಿಗ್ಬ್ರಾಂತಿಗೆ ಒಳಪಡಿಸಿದವು.
 
ಈ ಎಲ್ಲಾ ಸಂಗತಿಗಳನ್ನು ನನ್ನ ಸಿನಿಮಾದಲ್ಲಿ ತೋರಿಸಲಿದ್ದೇನೆ ಎಂದಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ ಪೋಸ್ಟರನ್ನೂ ಷೇರ್ ಮಾಡಿಕೊಂಡಿದ್ದಾರೆ ರಾಮ್ ಗೋಪಾಲ್ ವರ್ಮಾ. ಇನ್ನು ಶಶಿಕಲಾ ಮತ್ತವರ ಮನ್ನಾರ್‌ಗುಡಿ ಮಾಫಿಯಾ ಸಂಗತಿಗಳು ತೆರೆಯ ಮೇಲೆ ಯಾವ ರೀತಿ ಮೂಡಿಬರಲಿವೆ ಎಂಬ ಸಂಗತಿ ಕುತೂಹಲ ಮೂಡಿಸಿವೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ