ಅಂದು ನನಗೆ ಬೆಸ್ಟ್ ಫ್ರೆಂಡ್ ಆದವಳು..! ಪ್ರೀತಿಯ ಬಗ್ಗೆ ರಮೇಶ್ ಅರವಿಂದ್ ಹೇಳಿಕೊಂಡಿದ್ದು ಹೀಗೆ

ಬುಧವಾರ, 7 ಜುಲೈ 2021 (11:11 IST)
ಬೆಂಗಳೂರು: ನಟ ರಮೇಶ್ ಅರವಿಂದ್ ಪರ್ಫೆಕ್ಟ್ ನಟ, ನಿರ್ದೇಶಕ ಎನಿಸಿಕೊಂಡಂತೆ ತಮ್ಮ ವೈಯಕ್ತಿಕ ಜೀವನದಲ್ಲೂ ಪರ್ಫೆಕ್ಟ್ ಗೃಹಸ್ಥ ಎಂಬುದರಲ್ಲಿ ಎರಡು ಮಾತಿಲ್ಲ.


ಇಂತಿಪ್ಪ ರಮೇಶ್ ಅರವಿಂದ್ ಇಂದು ತಮ್ಮ ವೈವಾಹಿಕ ಜೀವನದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಜುಲೈ 7 ರಂದು 1991 ರಲ್ಲಿ ತಾವು ಪ್ರೀತಿಸಿದ ಅರ್ಚನಾ ಜೊತೆ ರಮೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಂದಿಗೆ ಅವರ ದಾಂಪತ್ಯಕ್ಕೆ 30 ವರ್ಷವಾಗಿದೆ.

ಈ ಸಂದರ್ಭದಲ್ಲಿ ತಮ್ಮ ಪತ್ನಿ ಬಗ್ಗೆ ಅವರು ವಿಶೇಷ ಸಾಲು ಬರೆದುಕೊಂಡಿದ್ದಾರೆ. ‘ಅಂದು ಅವಳು ನನಗೆ ಬೆಸ್ಟ್ ಫ್ರೆಂಡ್ ಆಗಿದ್ದವಳು, ಹೆಂಡತಿಯಾದರು. ಇಂದು ಹೆಂಡತಿಯೆ ನನ್ನ ಬೆಸ್ಟ್ ಫ್ರೆಂಡ್’ ಎಂದು ತಮ್ಮ ಪತ್ನಿ ಬಗ್ಗೆ ಖುಷಿಯಿಂದಲೇ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ