ಶಿವರಾಜಿ ಸುರತ್ಕಲ್ ಪಾರ್ಟ್ 2 ಶುರು ಮಾಡಿದ ರಮೇಶ್ ಅರವಿಂದ್

ಮಂಗಳವಾರ, 17 ಮಾರ್ಚ್ 2020 (09:53 IST)
ಬೆಂಗಳೂರು: ರಮೇಶ್ ಅರವಿಂದ್ ನಾಯಕರಾಗಿ ಅಭಿನಯಿಸಿದ್ದ ಶಿವಾಜಿ ಸುರತ್ಕಲ್ ಎಂಬ ಥ್ರಿಲ್ಲರ್ ಸಿನಿಮಾ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೇ ಹುಮ್ಮಸ್ಸಿನಲ್ಲಿ ನಿರ್ದೇಶಕ ಆಕಾಶ್ ಶ್ರೀವತ್ಸ ಪಾರ್ಟ್ 2 ಮಾಡುವುದಾಗಿ ಹೇಳಿದ್ದರು.


ಆದರೆ ಅವರು ಅಷ್ಟಕ್ಕೇ ಸುಮ್ಮನಾಗಿಲ್ಲ. ಈಗಾಗಲೇ ಶಿವಾಜಿ ಸುರತ್ಕಲ್ ಪಾರ್ಟ್ 2 ಕೆಲಸ ಶುರು ಮಾಡಿದ್ದಾರೆ. ನಿರ್ದೇಶಕ ಆಕಾಶ್ ಬರ್ತ್ ಡೇಗೆ ಶುಭ ಹಾರೈಸಿರುವ ರಮೇಶ್ ಅರವಿಂದ್ ಈ ವಿಚಾರವನ್ನು ಹೇಳಿದ್ದಾರೆ.

‘ಆಕಾಶ್ ಈಗಾಗಲೇ ಶಿವಾಜಿ ಸುರತ್ಕಲ್ ಎರಡನೇ ಭಾಗದ ಸ್ಕ್ರಿಪ್ಟ್ ತಯಾರಿಕೆಯಲ್ಲಿ ತೊಡಗಿದ್ದಾರೆ’ ಎಂದು ರಮೇಶ್ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ