ರಕ್ಷಿತ್ ಶೆಟ್ಟಿ ಆಹ್ವಾನಕ್ಕೆ ಓಕೆ ಓಕೆ ಎಂದ್ರು ನಟಿ ರಮ್ಯಾ!
ರಕ್ಷಿತ್ ಶೆಟ್ಟಿ ಸಂದರ್ಶನವೊಂದರಲ್ಲಿ ರಮ್ಯಾ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ರಕ್ಷಿತ್ ನಾನು ಇದುವರೆಗೆ ಅವರನ್ನು ಭೇಟಿಯಾಗಿಲ್ಲ. ಹಾಗಿದ್ದರೂ ಅವರು ನನ್ನ ಕ್ರಶ್. ಆವತ್ತಿಂದ ಈವರೆಗೂ ರಮ್ಯಾ ಎಂದರೆ ನನಗೆ ಏನೋ ಒಂದು ರೀತಿಯ ಅಭಿಮಾನ. ರಮ್ಯಾ ಜೊತೆ ನಟಿಸಲು ಅವಕಾಶವಿರುವಂತಹ ಸ್ಕ್ರಿಪ್ಟ್ ಸಿಕ್ಕರೆ ಖಂಡಿತಾ ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದಿದ್ದರು.
ಈ ವಿಡಿಯೋ ಶೇರ್ ಮಾಡಿರುವ ರಮ್ಯಾ, ಯೆ..ಸ್... ರಕ್ಷಿತ್ ಶೆಟ್ಟಿ ನಾನು ರೆಡಿ ಎಂದಿದ್ದಾರೆ. ಹೀಗಾಗಿ ಮುಂದೊಂದು ದಿನ ಇಬ್ಬರನ್ನೂ ತೆರೆ ಮೇಲೆ ಜೊತೆಯಾಗಿ ನೋಡಿದರೂ ಅಚ್ಚರಿಯಿಲ್ಲ.