ರಶ್ಮಿಕಾ ಮಂದಣ್ಣ ಸಂಭಾವನೆ ಡಿಮ್ಯಾಂಡ್ ಗೆ ಬೆಚ್ಚಿಬಿದ್ದ ನಿರ್ಮಾಪಕರು
ಇದೀಗ ರಶ್ಮಿಕಾ ಪುಷ್ಪ ಪಾರ್ಟ್ 2 ಗೆ 2 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರಂತೆ. ಅಷ್ಟೇ ಅಲ್ಲ, ತಮ್ಮ ಬಳಿ ಸಿನಿಮಾ ಕತೆ ಹೇಳಿಕೊಂಡು ಬರುವ ಬೇರೆ ನಿರ್ಮಾಪಕರಿಗೂ ಇಷ್ಟೇ ಸಂಭಾವನೆಗೆ ಬೇಡಿಕೆಯಿಡುತ್ತಿದ್ದಾರಂತೆ.
ಮೂಲಗಳ ಪ್ರಕಾರ ಇತ್ತೀಚೆಗೆ ರಶ್ಮಿಕಾರನ್ನು ಗೀಪಾ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಮಹಿಳಾ ಪ್ರಧಾನ ಸಿನಿಮಾವೊಂದರಲ್ಲಿ ಆಫರ್ ನೀಡಿದೆಯಂತೆ .ಆದರೆ ರಶ್ಮಿಕಾ ಅವರಿಗೂ 2 ಕೋಟಿ ರೂ. ಬೇಡಿಕೆಯಿಟ್ಟಿದ್ದಾರಂತೆ. ರಶ್ಮಿಕಾಗೆ ತೆಲುಗಿನಲ್ಲಿ ಹಿಟ್ ಸಿನಿಮಾ ಕೊಟ್ಟ ಗೀತಾ ಪಿಕ್ಚರ್ಸ್ ಸಂಸ್ಥೆಗೂ ರಶ್ಮಿಕಾ ವಿನಾಯ್ತಿ ನೀಡಿಲ್ಲ ಎಂಬುದು ಲೇಟೆಸ್ಟ್ ಸುದ್ದಿ.