ಅಕ್ಷಯ್ ಕುಮಾರ್ ಜತೆಗೆ ರಶ್ಮಿಕಾ ಮಂದಣ್ಣ! ಕಿರಿಕ್ ಬೆಡಗಿ ಹೇಳಿದ್ದೇನು ಗೊತ್ತಾ?

ಸೋಮವಾರ, 18 ಮೇ 2020 (09:15 IST)
ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಜತೆ ಟ್ವಿಟರ್ ನಲ್ಲಿ ಪ್ರಶ್ನೋತ್ತರ ಸೆಷನ್ ನಡೆಸಿದ್ದಾರೆ. ಈ ವೇಳೆ ಹಳೆಯ ಫೋಟೋ ಒಂದು ಎಲ್ಲರ ಗಮನ ಸೆಳೆದಿದೆ.


ಬಾಲಿವುಡ್ ನಟ ಅಕ್ಷಯ್ ಕುಮಾರ್ ಜತೆಗಿನ ರಶ್ಮಿಕಾ ಫೋಟೋ ಒಂದನ್ನು ಪ್ರಕಟಿಸಿದ ಅಭಿಮಾನಿಯೊಬ್ಬರು ನಿಮಗೆ ಈ ಫೋಟೋ ನೆನಪಿದೆಯಾ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಶ್ಮಿಕಾ ಇದು 2014 ರಲ್ಲಿ ತೆಗೆದ ಫೋಟೋ. ಫ್ರೆಶ್ ಫೇಸ್ ಇಂಡಿಯಾ ಫೈನಲ್ ನಲ್ಲಿ ತೆಗೆದಿದ್ದು, ಈ ವೇದಿಕೆಯಿಂದಾಗಿಯೇ ನಾನು ಈವತ್ತು ಇಲ್ಲಿದ್ದೇನೆ. ಈ ನೆನಪು ನನ್ನಲ್ಲಿ ಈಗಲೂ ಇದೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ