ಸೋಷಿಯಲ್ ಮೀಡಿಯಾಗೆ ಎಂಟ್ರಿಕೊಡಲಿರುವ ರವಿಚಂದ್ರನ್

ಬುಧವಾರ, 7 ಏಪ್ರಿಲ್ 2021 (10:35 IST)
ಬೆಂಗಳೂರು: ಕನ್ನಡದ ಬಹುತೇಕ ಕಲಾವಿದರೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಕ್ರೇಜಿಸ್ಟಾರ್ ರವಿಚಂದ್ರನ್ ಮಾತ್ರ ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದರು.


ಇದೀಗ ಅವರೂ ಇತರ ಕಲಾವಿದರ ಹಾದಿ ಹಿಡಿಯಲಿದ್ದಾರೆ. ಕ್ರೇಜಿಸ್ಟಾರ್ ಸದ್ಯದಲ್ಲೇ ತಮ್ಮದೇ ಒಂದು ಯೂ ಟ್ಯೂಬ್ ಚಾನೆಲ್ ತೆರೆಯಲಿದ್ದಾರೆ. ಅದಕ್ಕೆ ಒನ್ ಆಂಡ್ ಓನ್ಲೀ ಎಂದು ನಾಮಕರಣ ಮಾಡಿದ್ದಾರೆ.

ಈ ಯೂ ಟ್ಯೂಬ್ ಚಾನೆಲ್ ನಲ್ಲಿ ಅವರ ಸಿನಿ ಜೀವನದ ಕತೆ, ಸಿನಿಮಾ ಕುರಿತ ಅಪ್ ಡೇಟ್ ಎಲ್ಲವೂ ಸಿಗಲಿದೆಯಂತೆ. ಟೀಸರ್ ರಿಲೀಸ್ ಮಾಡುವ ಮೂಲಕ ರವಿಚಂದ್ರನ್ ತಾವು ಸೋಷಿಯಲ್ ಮೀಡಿಯಾಗೆ ಎಂಟ್ರಿಕೊಡುತ್ತಿರುವ ವಿಚಾರವನ್ನು ತಮ್ಮದೇ ಸ್ಟೈಲ್ ನಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ