ರಾಜಕೀಯಕ್ಕೆ ಸೇರುತ್ತಾರಾ ರಿಷಬ್ ಶೆಟ್ಟಿ? ಕಾಂತಾರ ಸ್ಟಾರ್ ಹೇಳಿದ್ದೇನು?

ಭಾನುವಾರ, 12 ಫೆಬ್ರವರಿ 2023 (08:32 IST)
Photo Courtesy: Twitter
ಬೆಂಗಳೂರು: ಚುನಾವಣೆ ಹೊಸ್ತಿಲಿನಲ್ಲಿ ಕೆಲವು ಸಿನಿಮಾ ನಟರು ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ರೂಮರ್ ಗಳು ಹಬ್ಬುವುದು ಸಹಜ.

ಅದೇ ರೀತಿ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಕೂಡಾ ಈ ಬಾರಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ, ಅವರಿಗೆ ರಾಜಕೀಯ ಪಕ್ಷಗಳಿಂದ ಆಫರ್ ಬಂದಿದೆ ಎಂಬ ಸುದ್ದಿ ಹಬ್ಬಿತ್ತು.

ಈ ಬಗ್ಗೆ ಮಾಧ‍್ಯಮ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ರಿಷಬ್ ಸ್ಪಷ್ಟನೆ ನೀಡಿದ್ದಾರೆ. ‘ಒಂದು ಮಾಧ್ಯಮದವರ ಪ್ರಕಾರ ನನಗೆ ಮೂರು ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ. ಬದಲಾವಣೆ ತರಬೇಕೆಂದರೆ ರಾಜಕೀಯ ಸೇರಬೇಕೆಂದಿಲ್ಲ. ಒಂದು ಸಮಾಜ ಬದಲಾಗಬೇಕಾದರೆ ನಮ್ಮೆಲ್ಲರ ಕೊಡುಗೆ ಬೇಕು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ