ರಾಬರ್ಟ್ ಸಿನಿಮಾದ ಮತ್ತೊಂದು ಹಾಡು ನಾಳೆ ಬಿಡುಗಡೆ

ಶುಕ್ರವಾರ, 20 ಮಾರ್ಚ್ 2020 (09:10 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಮತ್ತೊಂದು ಹಾಡು ಇಂದು ಬಿಡುಗಡೆಯಾಗುತ್ತಿದೆ.


ಈಗಾಗಲೇ ರಾಬರ್ಟ್ ಸಿನಿಮಾದ ಎರಡು ಹಾಡುಗಳು ಬಿಡುಗಡೆಯಾಗಿದ್ದು ಎರಡೂ ಅತೀ ಹೆಚ್ಚು ವೀಕ್ಷಣೆ ಪಡೆದಿದೆ. ಇದೀಗ ಮೂರನೇ ಹಾಡು ಬಿಡುಗಡೆಯಾಗುತ್ತಿದೆ.

ದರ್ಶನ್-ತರುಣ್ ಕಾಂಬಿನೇಷನ್ ನ ‘ದೋಸ್ತ ಕಣೋ’ ಎಂಬ ಹಾಡು ನಾಳೆ ಬೆಳಿಗ್ಗೆ 11.04 ಕ್ಕೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ