ನಮ್ಮ ಮಧ್ಯೆ ಕಿಚ್ಚು ಹಚ್ಚಬೇಡಿ! ಖಾಸಗಿ ವಾಹಿನಿಗೆ ಯಶ್ ಫ್ಯಾನ್ಸ್ ಎಚ್ಚರಿಕೆ

ಗುರುವಾರ, 31 ಜನವರಿ 2019 (10:54 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಪೈಪೋಟಿಗೆ ಬಿದ್ದಿದ್ದಾರೆ. ಈ ಎರಡೂ ಸ್ಟಾರ್ ನಟರ ಅಭಿಮಾನಿಗಳ ನಡುವೆ ವಾರ್ ಶುರುವಾಗಿದೆ ಎಂದೆಲ್ಲಾ ಸುದ್ದಿ ಪ್ರಸಾರ ಮಾಡಿದ್ದ ಖಾಸಗಿ ವಾಹಿನಿ ವಿರುದ್ಧ ಅಭಿಮಾನಿಗಳೇ ತಿರುಗಿಬಿದ್ದಿದ್ದಾರೆ.


ತಮ್ಮ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಖಾಸಗಿ ವಾಹಿನಿಗೆ ಎಚ್ಚರಿಕೆ ನೀಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ನಾವು ಚೆನ್ನಾಗಿಯೇ ಇದ್ದೇವೆ. ನಮ್ಮ ನಡುವೆ ತಂದಿಡಬೇಡಿ ಎಂದಿದ್ದಾರೆ.

‘ಈ ರೀತಿ ಇಲ್ಲದೇ ಇರುವ ವಿಚಾರದ ಬಗ್ಗೆ ಪ್ರೋಗ್ರಾಂ ಮಾಡಿ ಇಬ್ಬರ ಮಧ್ಯೆ ತಂದಿಡೋ ಕೆಲಸ ದಯವಿಟ್ಟು ಮಾಡಬೇಡಿ’ ಎಂದು ಯಶ್ ಅಭಿಮಾನಿಗಳು ಮನವಿ ಜತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಪುನೀತ್-ಯಶ್ ಅಭಿಮಾನಿಗಳ ನಡುವೆ ವಾರ್ ಶುರುವಾಗಿದೆ. ಇದೀಗ ದರ್ಶನ್-ಪುನೀತ್ ಅಭಿಮಾನಿಗಳು ಒಂದಾಗಿದ್ದಾರೆ ಎಂದೆಲ್ಲಾ ಖಾಸಗಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ