ಮದುವೆ ತಯಾರಿಗೆ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡ ರಾಕಿಂಗ್ ಸ್ಟಾರ್ ಯಶ್

ಸೋಮವಾರ, 7 ನವೆಂಬರ್ 2016 (11:35 IST)
ಬೆಂಗಳೂರು: ಸ್ಯಾಂಡಲ್ ವುಡ್ ತಾರಾ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಡಿಸೆಮಬರ್ ನಲ್ಲಿ ಮದುವೆಯಾಗುವುದಾಗಿ ಈಗಾಗಲೇ ಘೋಷಿಸಿಕೊಂಡಿದ್ದರು. ಇದೀಗ ಯಶ್ ತಮ್ಮ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದು, ಚಿತ್ರರಂಗದಿಂದ ಕೆಲವು ದಿನಗಳ ಕಾಲ ದೂರವಿರಲಿದ್ದಾರೆ.

ಇವರ ವಿವಾಹ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಸೆಂಬರ್ 10 ಮತ್ತು 11 ರಂದು ನಡೆಯಲಿದೆ. ಇದಕ್ಕಾಗಿ ಯಶ್ ಮತ್ತು ರಾಧಿಕಾ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಯಶ್ ಮುಂದಿನ ಚಿತ್ರ ಕೆಜಿಎಫ್ ಚಿತ್ರೀಕರಣವನ್ನು ಜನವರಿಗೆ ಮುಂದೂಡಿದ್ದಾರೆ.

ಸದ್ಯಕ್ಕೆ ಇಬ್ಬರೂ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೂಡಾ ಯಶ್ ಇದೇ ಮಾತನ್ನು ಹೇಳಿದ್ದರು. ಸಿನಿಮಾ ಸಾಕು ಸ್ವಲ್ಪ ಮದುವೆ ಕಡೆಗೆ ಗಮನ ಕೊಡು ಎಂದು ಮನೆಯಲ್ಲಿ ಒತ್ತಾಯ ಮಾಡುತ್ತಿದ್ದಾರೆಂದಿದ್ದರು. ಹೆತ್ತವರ ಒತ್ತಾಯಕ್ಕೆ ಮಣಿದು ಕೊನೆಗೂ ಮದುವೆಗೆ ಮನಸು ಮಾಡಿದ್ದಾರೆ ಯಶ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ