ಪುಷ್ಪ, ಸೂರ್ಯವಂಶಿ ದಾಖಲೆಯನ್ನೂ ಮುರಿದ ಆರ್ ಆರ್ ಆರ್

ಶನಿವಾರ, 2 ಏಪ್ರಿಲ್ 2022 (09:20 IST)
ಹೈದರಾಬಾದ್: ತ್ರಿಬಲ್ ಆರ್ ಸಿನಿಮಾ ಬಿಡುಗಡೆಯಾಗಿ ವಾರ ಕಳೆಯುವಷ್ಟರಲ್ಲಿ ಸಾಕಷ್ಟು ದಾಖಲೆಗಳನ್ನು ದೂಳೀಪಟ ಮಾಡಿದೆ.

ಇದೀಗ ಉತ್ತರ ಭಾರತದಲ್ಲೂ ತನ್ನ ಪ್ರತಾಪ ತೋರಿಸುತ್ತಿರುವ ಆರ್ ಆರ್ ಆರ್ ಈ ಮೊದಲು ಬಿಡುಗಡೆಯಾಗಿದ್ದ ಪುಷ್ಪ, ಸೂರ್ಯವಂಶಿ ಸಿನಿಮಾ ದಾಖಲೆಯನ್ನೂ ಮುರಿದಿದೆ.

ಬಾಕ್ಸ್ ಆಫೀಸ್ ನಲ್ಲಿ 700 ಕೋಟಿ ರೂ. ಗೂ ಹೆಚ್ಚು ಗಳಿಕೆ ಮಾಡಿರುವ ಆರ್ ಆರ್ ಆರ್ ಹಿಂದಿಯಲ್ಲಿ ಮಾತ್ರ ಆರೇ ದಿನಗಳಲ್ಲಿ 120.59 ಕೋಟಿ ರೂ. ಗಳಿಕೆ ಮಾಡಿದೆ. ಈ ಮೊದಲು  ಸೂರ್ಯವಂಶಿ ಏಳು ದಿನಗಳಲ್ಲಿ 120.66 ಕೋಟಿ ರೂ. ಗಳಿಕೆ ಮಾಡಿತ್ತು. ಪುಷ್ಪ ಒಟ್ಟಾರೆ ಗಳಿಕೆಯೇ 26.89 ಕೋಟಿ ರೂ.ಗಳಷ್ಟೇ. ಆದರೆ ಆರ್ ಆರ್ ಆರ್ ಇವೆಲ್ಲವನ್ನೂ ದಾಟಿ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ