’ಸೇಡ್’ ಚಿತ್ರದ ನಾಯಕ ಲಕ್ಷ್ಮೀಶ್‌ಗೆ ಅಪಘಾತ, ಪರಿಸ್ಥಿತಿ ಗಂಭೀರ

ಮಂಗಳವಾರ, 7 ಮಾರ್ಚ್ 2017 (12:51 IST)
ಜೆ.ಎಸ್. ಮಹೇಶ್ ನಿರ್ದೇಶನದ `ಸೇಡ್' ಚಿತ್ರ ಭಾನುವಾರ ಬೆಂಗಳೂರಿನ ನಾಗದೇವನಹಳ್ಳಿ ಬಳಿ ಮುಹೂರ್ತ ಆಚರಿಸಿಕೊಂಡಿತ್ತು. ಶೃಂಗೇರಿ ಕೊಪ್ಪದಲ್ಲಿ ಚಿತ್ರೀಕರಣ ಆರಂಭಗೊಳ್ಳಬೇಕಿತ್ತು. ಈ ಚಿತ್ರದಲ್ಲಿ ವಿದೇಶೀ ಬೈಕ್ ಒಂದನ್ನು ಪ್ರಮುಖವಾಗಿ ಬಳಸಲಾಗುತ್ತಿದೆ.
 
ಆ ಬೈಕ್ ಅನ್ನು ಸ್ವತಃ ಚಿತ್ರದ ದ್ವಿತೀಯ ನಾಯಕ ಲಕ್ಷ್ಮೀಶ್ ನಾಯಕ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಹಾಸನದ ಹಿರಿಸಾವೆ ಬಳಿ ತೆರಳುತ್ತಿದ್ದಾಗ ಸಂಜೆ 6.30 ರ ಸಮಯದಲ್ಲಿ ಎದುರಿನಿಂದ ಬಂದ ಪಲ್ಸರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಪಲ್ಸರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 
 
ಸೇಡ್ ಚಿತ್ರದ ನಾಯಕ ಲಕ್ಷ್ಮೀಶ್ ನಾಯಕ್ ಪರಿಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರತಂಡ ಈಗಾಗಲೇ ಹಾಸನಕ್ಕೆ ತೆರಳಿದೆ. ಈ ನಡುವೆ ನಾಳೆಯಿಂದ ಆರಂಭವಾಗಬೇಕಿದ್ದ ಚಿತ್ರೀಕರಣ ಏನಾಗಲಿದೆ ಎಂದು ಇನ್ನೂ ತಿಳಿದುಬಂದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ