ಸೆಪ್ಟೆಂಬರ್ 6 ಕ್ಕೆ ಸಲಾರ್ ಟ್ರೈಲರ್?

ಗುರುವಾರ, 31 ಆಗಸ್ಟ್ 2023 (16:54 IST)
ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶಿಸಿ ಪ್ರಭಾಸ್ ನಾಯಕರಾಗಿರುವ ಸಲಾರ್ ಸಿನಿಮಾ ಟ್ರೈಲರ್ ಸೆಪ್ಟೆಂರ್ 6 ಕ್ಕೆ ರಿಲೀಸ್ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಸೆಪ್ಟೆಂಬರ್ 3 ರಂದು ಈ ಬಗ್ಗೆ ಚಿತ್ರತಂಡ ಅಧಿಕೃತ ಪ್ರಕಟಣೆ ನೀಡುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಸಲಾರ್ ಟ್ರೈಲರ್ ನ್ನು ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಈ ವಾರಂತ್ಯವೇ ಪ್ರಶಾಂತ್ ನೀಲ್ ಮತ್ತು ತಂಡ ಹೈದರಾಬಾದ್ ಗೆ ಬಂದಿಳಿಯಲಿದೆ.

ಸಲಾರ್ ಸಿನಿಮಾ ಬಹುಭಾಷೆಗಳಲ್ಲಿ ಸೆಪ್ಟೆಂಬರ್ 28 ರಂದು ಬಿಡುಗಡೆಯಾಗುತ್ತಿದೆ. ಕೆಜಿಎಫ್ 2 ಸಿನಿಮಾ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಮತ್ತೊಂದು ಸಿನಿಮಾ ಇದಾಗಿದೆ. ಕೆಜಿಎಫ್ ನಂತೇ ಇಲ್ಲಿಯೂ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಗಳಿದ್ದು, ಪ್ರಭಾಸ್ ಗೆ ಈ ಸಿನಿಮಾ ಬ್ರೇಕ್ ಕೊಡಬಹುದು ಎಂದು ನಿರೀಕ್ಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ